Thursday, July 7, 2022

Latest Posts

ಸೆಲೆಬ್ರಿಟಿಯಾಗಿ ನಾನು ಆಕ್ಸಿಜನ್ ಪಡಿಯೋಕೆ ಪರದಾಡಿದ್ದೇನೆ… ಕೊರೋನಾ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸಬೇಡಿ: ಸಾಧು ಕೋಕಿಲ ಕಳವಳ

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ಮತ್ತೊಂದು ಕಡೆ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಸಿಗದೆ ಸಾವಿರಾರು ಜನರು ಪರದಾಡುತ್ತಿದ್ದಾರೆ.
ಕಿರುತೆರೆ ನಟ ರಮೇಶ್ ಪಂಡಿತ್ ಮತ್ತು ಸುನೇತ್ರ ಪಂಡಿತ್ ಬಳಿಕ ಕೊರೊನಾ ಬಿಸಿ ಮುಟ್ಟಿದೆ. ಇದೀಗ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರಿಗೂ ತಟ್ಟಿದ್ದು, ಕೊರೋನಾ ಬಗ್ಗೆ ಯಾರು ಬೇಜವಾಬ್ದಾರಿಯಿಂದ ವರ್ತಿಸಬೇಡಿ ಎಂದು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಉಪೇಂದ್ರ ಮತ್ತು ಹರಿಪ್ರಿಯಾ ಅಭಿನಯದ ಲಗಾಮ್ ಚಿತ್ರದ ಮುಹೂರ್ತ ಸಂದರ್ಭದಲ್ಲಿ ಕೊರೋನಾ ಬಗ್ಗೆ ಮಾತನಾಡಿದ ಸಾಧು ಕೋಕಿಲ, ತಮ್ಮ ಅಣ್ಣನ ಮಗನಿಗೆ ಕೊರೋನಾ ಪಾಸಿಟಿವ್​ ಆಗಿತ್ತು. ಹಾಗಾಗಿ, ಇದರ ಸಮಸ್ಯೆ ಏನು ಎಂಬುದನ್ನು ನಾನು ಹತ್ತಿರದಿಂದ ನೋಡಿದ್ದೇನೆ.
ಈಗ ಆತನಿಗೆ ನೆಗೆಟಿವ್​ ಬಂದಿದೆ. ಆದರೂ ಅವನಿಗೆ ಉಸಿರಾಟ ತೊಂದರೆ ಆಗುತ್ತಿದೆ. ಒಬ್ಬ ಸೆಲೆಬ್ರಿಟಿಯಾಗಿ ನಾನು ಒಂದು ಆಕ್ಸಿಜನ್ ಪಡಿಯೋಕೆ ಪರದಾಡಿದ್ದೇನೆ. ದಯವಿಟ್ಟು ಎಲ್ಲರೂ ಹುಷಾರಾಗಿರಿ ಎಂದರು.
ಕೊರೊನಾ ವೈರಸ್​ ಬಗ್ಗೆ ಟಿವಿಯಲ್ಲಿ ತೋರಿಸೋದು ಸುಳ್ಳು ಅಂದುಕೊಳ್ಳಬೇಡಿ. ಹಬ್ಬ, ಹರಿದಿನ, ಜಾತ್ರೆ ಎಲ್ಲಾ ಬಿಟ್ಟು ಹುಷಾರಾಗಿರಿ ಎಂದು ಸಾಧು ಕೋಕಿಲ ಜನರಿಗೆ ಕಿವಿಮಾತು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss