spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತಾಯಿಯಾಗಿ ನನ್ನ ಖಾಸಗಿತನವನ್ನು ಗೌರವಿಸಿ ಎಂದು ಕೇಳಿಕೊಳ್ಳುತ್ತೇನೆ: ಶಿಲ್ಪಾಶೆಟ್ಟಿ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಶ್ಲೀಲ ಚಿತ್ರಗಳ ನಿರ್ಮಾಣ ಸಂಬಂಧ ಪತಿ ರಾಜ್​ಕುಂದ್ರಾ ಬಂಧನದ ಬಳಿಕ ಪತ್ನಿ ಶಿಲ್ಪಾಶೆಟ್ಟಿ ಮೊದಲ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಈ ಪ್ರಕರಣ ಸಂಬಂಧ ನಾನು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾನು ನೀಡಿದ್ದೇನೆ ಎನ್ನಲಾದ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆರವುಗೊಳಿಸಬೇಕು ಎಂದು ತಮ್ಮ ಇನ್​ಸ್ಟಾದಲ್ಲಿ ಪೋಸ್ಟ್ ಹಾಕಿದ್ದಾರೆ.
ಇನ್ಸ್​ಟಾಗ್ರಾಂನಲ್ಲಿ ಸುದೀರ್ಘವಾಗಿ ತಮ್ಮ ತುಮುಲಗಳನ್ನು ಹಂಚಿಕೊಂಡಿರುವ ಶೆಟ್ಟಿ, ತಮ್ಮ ಈ ಸಂಕಷ್ಟದ ಸಮಯದಲ್ಲಿ ಖಾಸಗಿತನಕ್ಕೆ ಬೆಲೆ ಕೊಡಿ ಎಂದು ಕೇಳಿಕೊಂಡಿದ್ದಾರೆ. ಪ್ರಕರಣದ ಬಗ್ಗೆ ತಾವು ಏನೂ ಕಾಮೆಂಟ್​ ಮಾಡುವುದಿಲ್ಲ. ಏಕೆಂದರೆ ಅದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎಂದಿರುವ ಶಿಲ್ಪಾ, ‘ನನ್ನ ಹೆಸರಿನ ನಕಲಿ ಹೇಳಿಕೆಗಳನ್ನು ಬಿಟ್ಟುಬಿಡಿ. ನಾನು ಏನೂ ಕಾಮೆಂಟ್​ ಕೊಡುವುದಿಲ್ಲ. ಸೆಲೆಬ್ರಿಟಿಯಾಗಿ ನಾನು ನೆವರ್​ ಕಂಪ್ಲೇನ್, ನೆವರ್ ಎಕ್ಸ್​ಪ್ಲೇನ್​​ ತತ್ವವನ್ನು ಅನುಸರಿಸುತ್ತೇನೆ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
‘ಕಳೆದ ಕೆಲವು ದಿನಗಳಲ್ಲಿ ನನ್ನ ಬಗ್ಗೆ ಹಲವು ವದಂತಿಗಳು, ಆರೋಪಗಳು ಮತ್ತು ನನ್ನ ಮೇಲೆ ಅನಗತ್ಯ ಹೇಳಿಕೆಗಳು ಮಾಧ್ಯಮದಲ್ಲಿ ಮತ್ತು ನನ್ನ ಹಿತೈಷಿಗಳೆನ್ನುವವರಿಂದಲೇ ಬಂದಿದೆ. ನನ್ನನ್ನು ಮತ್ತು ನನ್ನ ಕುಟುಂಬವನ್ನು ಟ್ರೋಲ್​ಮಾಡಲಾಗುತ್ತಿದ್ದು, ಪ್ರಶ್ನೆಗಳನ್ನು ಹಾಕಲಾಗುತ್ತಿದೆ’.
‘ಒಂದು ಕುಟುಂಬವಾಗಿ, ನಾವು ಎಲ್ಲಾ ಕಾನೂನು ಪರಿಹಾರಗಳನ್ನು ಪಡೆಯುವ ಯತ್ನದಲ್ಲಿದ್ದೇವೆ. ಈ ಸಂದರ್ಭದಲ್ಲಿ ನಾನು, ವಿಶೇಷವಾಗಿ ಒಬ್ಬ ತಾಯಿಯಾಗಿ ನನ್ನ ಮಕ್ಕಳಿಗೋಸ್ಕರ, ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ಕೇಳಿಕೊಳ್ಳುತ್ತೇನೆ. ದಯವಿಟ್ಟು ಅರ್ಧಂಬರ್ಧ ಮಾಹಿತಿಯ ಮೇಲೆ ಅದರ ಸತ್ಯಾಸತ್ಯತೆ ತಿಳಿಯದೆ ಕಾಮೆಂಟ್ ಮಾಡಬೇಡಿ’ ಎಂದಿದ್ದಾರೆ.
‘ನಾನು ಒಬ್ಬ ಹೆಮ್ಮೆಯ ಕಾನೂನು ಪಾಲಕ ನಾಗರೀಕಳಾಗಿದ್ದೇನೆ. ಕಳೆದ 29 ವರ್ಷಗಳಿಂದ ಶ್ರಮಪಟ್ಟು ದುಡಿಯುವ ವೃತ್ತಿಪರಳಾಗಿದ್ದೇನೆ. ಜನ ನನ್ನಲ್ಲಿ ನಂಬಿಕೆ ಇರಿಸಿದ್ದಾರೆ. ನಾನವರಿಗೆ ಎಂದೂ ನಿರಾಶೆ ಮಾಡಿಲ್ಲ’. ‘ತುಂಬಾ ಮುಖ್ಯವಾಗಿ, ಈ ಸಮಯದಲ್ಲಿ ನನ್ನ ಮತ್ತು ನನ್ನ ಕುಟುಂಬದ ಖಾಸಗಿತನದ ಹಕ್ಕನ್ನು ಗೌರವಿಸಬೇಕೆಂದು ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ.
ಜೊತೆಗೆ, ತಮಗೆ ಮುಂಬೈ ಪೊಲೀಸರ ಬಗ್ಗೆ, ಭಾರತದ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆಯಿದೆ ಎಂದಿರುವ ಶಿಲ್ಪಾ, ‘ನಾವು ಮೀಡಿಯಾ ಟ್ರಯಲ್​​ಗೆ ಒಳಗಾಗಬಾರದು. ಕಾನೂನು ತನ್ನ ಕೆಲಸ ಮಾಡಲಿ ಬಿಡಿ. ಸತ್ಯಮೇವ ಜಯತೇ’ ಎಂದಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss