MUST READ | ಕುಂಭ ರಾಶಿಯವರು ಹೆಂಡತಿಯನ್ನು ಪ್ರೀತಿಯಿಂದ ನೋಡ್ಕೋತಾರಂತೆ, ಇನ್ನು ಏನೇನೋ ಗುಣಗಳಿವೆ ನೋಡಿ…

ಎಲ್ಲ ರಾಶಿಯವರಿಗೂ ಪ್ರತ್ಯೇಕವಾದ ಗುಣಲಕ್ಷಣಗಳಿವೆ, ಈ ರಾಶಿ ಅನ್ವಯ ಈ ವ್ಯಕ್ತಿ ಹೀಗಿರಬಹುದು ಎಂದು ಅಂದಾಜಿಸಲಾಗುತ್ತದೆ. ಎಲ್ಲ ಗುಣಗಳು ಒಬ್ಬ ವ್ಯಕ್ತಿಗೆ ಮ್ಯಾಚ್ ಆಗಬೇಕು ಎಂದೇನಿಲ್ಲ. ಆದರೆ ಹೆಚ್ಚಿನ ಪಕ್ಷದ ಗುಣಗಳು ಹೊಂದುತ್ತವೆ.. ಕುಂಭ ರಾಶಿಯವರ ಗುಣಲಕ್ಷಣಗಳು ಹೀಗಿವೆ..

  • ಈ ರಾಶಿಯವರಿಗೆ ದೂರದೃಷ್ಟಿ ಹೆಚ್ಚಂತೆ, ಮುಂದೆ ಏನಾಗುತ್ತದೆ, ಏನಾಗಬೇಕು ಎನ್ನುವ ಆಲೋಚನೆ ಮಾಡಿಯೇ ಮುಂದುವರಿಯುತ್ತಾರೆ.
  • ಇವರು ಲೆಕ್ಕಾಚಾರದ ಮಂದಿ, ಎಲ್ಲ ವಿಷಯದಲ್ಲಿಯೂ ಲೆಕ್ಕಾಚಾರ ಮಾಡುತ್ತಾರೆ, ಸಂಖ್ಯೆಗಳು ಇವರಿಗೆ ಸುಲಭದ ವಿಚಾರ, ಬ್ಯುಸಿನೆಸ್ ಸೂಕ್ತ ಉದ್ಯೋಗ.
  • ಮನುಷ್ಯರಿಗೆ ಇವರು ಬೆಲೆ ಕೊಡುತ್ತಾರೆ, ಅವರು ಕೆಟ್ಟ ಮನುಷ್ಯನೇ ಆಗಿರಲಿ, ಮನುಷ್ಯರಿಗೆ ಕೊಡೋ ಬೇಸಿಕ್ ಗೌರವ ಕೊಟ್ಟೇ ಕೊಡುತ್ತಾರೆ.
  • ಸ್ವತಂತ್ರವಾಗಿ ಇರೋದಕ್ಕೆ ಇವರು ಇಷ್ಟಪಡುತ್ತಾರೆ, ಇತರರ ಮೇಲೆ ಡಿಪೆಂಡ್ ಆಗೋಕೆ ಇಷ್ಟಪಡೋದಿಲ್ಲ. ತಮ್ಮ ಸ್ವಾತಂತ್ರ್ಯ ವನ್ನು ಅತಿಯಾಗಿ ಪ್ರೀತಿಸುತ್ತಾರೆ.
  • ಇವರನ್ನು ಮದುವೆಯಾಗುವ ಹುಡುಗಿ ಲಕ್ಕಿ. ಯಾಕಂದ್ರೆ ಇವರು‌ ಈಸಿ ಗೋಯಿಂಗ್, ಯಾವುದೇ ಅಡೆತಡೆ ಇಲ್ಲದೆ ಹಾಯಾಗಿ ಇವರ ಜತೆ ಸಂಸಾರ ಮಾಡಬಹುದು.
  • ಇವರು ಹಠಮಾರಿ ಸ್ವಭಾವದವರು, ಕೆಲವೊಮ್ಮೆ ಇದೇ ಅವರಿಗೆ ಮುಳ್ಳಾಗುತ್ತದೆ, ಎಲ್ಲದಕ್ಕೂ ಹಠ ಮಾಡುವ ಸ್ವಭಾವ ಉತ್ತಮವಲ್ಲ.
  • ಕೆಲವೊಮ್ಮೆ ಭಾವನೆಗಳೇ ಇಲ್ಲದವರಂತೆ ಬದುಕುತ್ತಾರೆ, ಯಾವ , ಯಾರ ಭಾವನೆಗೂ‌ ಬೆಲೆ ಕೊಡೋದಿಲ್ಲ. ತಮ್ಮ ದಾರಿಯಲ್ಲೇ ನಡೆಯುತ್ತಾರೆ.
  • ಅತಿಯಾಗಿ ಆಲೋಚನೆ ಮಾಡುವ ವರು ಓವರ್ ಥಿಂಕರ್ಸ್, ಅಗತ್ಯಕ್ಕಿಂತ ಹೆಚ್ಚಿನ ಯೋಚನೆ ಮಾಡಿ, ಮನಸ್ಸನ್ನು ಗೊಬ್ಬರ ಮಾಡಿಕೊಳ್ತಾರೆ
  • ಈ ರಾಶಿಯವರು ಮುಂಗೋಪಿಗಳು, ಸಿಟ್ಟು ತಕ್ಷಣವೇ ಬರುತ್ತದೆ, ಹಾಗೆ ಮಾಯ ಕೂಡ ಆಗುತ್ತದೆ, ಆದರೆ ಸಿಟ್ಟಿನಲ್ಲಿ ಮಾತಿನ ಮೇಲೆ ನಿಗಾ ಇಡೋದಿಲ್ಲ.
  • ಇವರಿಗೆ ತಂದೆ-ತಾಯಿ ಮೇಲೆ ಗೌರವ ಹೆಚ್ಚು, ಪೋಷಕರ ಪ್ರೀತಿಗಾಗಿ ಸದಾ ಹವಣಿಸುತ್ತಾರೆ.
  • ಪ್ರೀತಿ ವಿಷಯದಲ್ಲಿ ಇವರು ತುಂಬಾನೇ ಲಕ್ಕಿ, ಇವರು ಬಯಸುವ ಸಂಗಾತಿಯೇ ಇವರಿಗೆ ಸಿಗುತ್ತಾಳೆ, ಸಾಂಸಾರಿಕ ಜೀವನದ ಎಲ್ಲ ಸುಖವನ್ನು ಇವರು ಅನುಭವಿಸುತ್ತಾರೆ.
  • ಆಸ್ತಿ, ಹಣದ ವಿಷಯದಲ್ಲಿ ಇವರಿಗೆ ಉಳಿತಾಯ ಮಾಡುವ ಚಾಕಚಕ್ಯತೆ ಇಲ್ಲ. ಇದ್ದ ಹಣವನ್ನು ಇರುವಾಗಲೇ ಖರ್ಚು ಮಾಡುವ ಗುಣ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!