ಹೊಸದಿಗಂತ ಆನ್ ಲೈನ್ ಡೆಸ್ಕ್ :
ಭಾರತದಲ್ಲಿ ಕೋವಿಡ್ಗೆ ಸಂಬಂಧಿಸಿ ಶುಭಸುದ್ದಿ ಕೇಳಿಬಂದಿದೆ. ಸಕ್ರಿಯ ಕೋವಿಡ್ ಪ್ರಕರಣಗಳು ಮಾರ್ಚ್ ಅಂತ್ಯದ ವೇಳೆಗೆ ಕೆಲವೇ ಸಾವಿರಗಳಿಗೆ ಇಳಿಯುವ ಲಕ್ಷಣಗಳಿವೆ ಎಂದು ಪರಿಣತರು ಹೇಳಿದ್ದಾರೆ.
ಸರಕಾರಿ ತಜ್ಞರ ತಂಡವೊಂದು ರೂಪಿಸಿರುವ ವರದಿಯ ಪ್ರಕಾರ ಮಾರ್ಚ್ನಲ್ಲಿ ಕೋವಿಡ್ ಪ್ರಕರಣಗಳಲ್ಲಿ ಭಾರೀ ಕುಸಿತವಾಗುವ ಸಂಭವವಿದೆ ಎಂದು ಹೇಳಿದೆ.
ದೇಶದ ಬಹುಪಾಲು ಜನತೆಗೆ ವೈರಸ್ನ ವಿರುದ್ಧ ರೋಗನಿರೋಧಕ ಶಕ್ತಿ ಬಂದಿದೆ. ಜತೆಗೇ ನೈಸರ್ಗಿಕ ರೋಗನಿರೋಧಕ ಶಕ್ತಿಗಳೂ ಸೇರಿ ಕೋವಿಡ್ ಪ್ರಸರಣ ಕಡಿಮೆಯಾಗಬಹುದು ಎಂದಿದೆ ವರದಿ.
ಆದರೆ ಇದೇ ವೇಳೆ, ವೈದ್ಯಕೀಯ ತಂಡವೊಂದು ಎಚ್ಚರಿಕೆ ನೀಡಿದ್ದು, ಕೋವಿಡ್ನ ಭಾರತೀಯ ಸ್ವರೂಪವು ರೋಗನಿರೋಧಕ ಶಕ್ತಿ ಬೆಳೆದಿರುವವರಲ್ಲೂ ಸೋಂಕು ಉಂಟುಮಾಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.