ಮೆಟಾ ಕಂಪನಿಯ ಭಾರತದ ಮುಖ್ಯಸ್ಥರಾಗಿ ಸಂಧ್ಯಾ ದೇವನಾಥನ್​ ನೇಮಕ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಫೇಸ್​ಬುಕ್​ ವಾಟ್ಸ್​ಆ್ಯಪ್​ಗಳ ಒಡೆತನ ಹೊಂದಿರುವ ಮೆಟಾ ಕಂಪನಿಯ ಭಾರತದ ಮುಖ್ಯಸ್ಥರಾಗಿ ಸಂಧ್ಯಾ ದೇವನಾಥನ್​ ಅವರನ್ನು ನೇಮಕ ಮಾಡಲಾಗಿದೆ.
ಈ ಹಿಂದಿನ ಮುಖ್ಯಸ್ಥರಾಗಿದ್ದ ಅಜಿತ್​ ಮೋಹನ್​ ಅವರು ಇತ್ತೀಚೆಗಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾದ ಜಾಗವನ್ನು ದೇವನಾಥನ್​ ತುಂಬಲಿದ್ದಾರೆ.
ವಾಟ್ಸ್​ಆ್ಯಪ್​ನ ಭಾರತದ ಮುಖ್ಯಸ್ಥ ಅಭಿಜಿತ್ ಬೋಸ್ ಮತ್ತು ಭಾರತದಲ್ಲಿ ಮೆಟಾ ಸಂಸ್ಥೆಯ ಸಾರ್ವಜನಿಕ ನೀತಿ ನಿರ್ದೇಶಕ ರಾಜೀವ್ ಅಗರ್​ವಾಲ್​ ಕೂಡ ಇತ್ತೀಚೆಗೆ ಕಂಪನಿಯಿಂದ ಹೊರಬಂದಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಟೆಕ್ ಕಂಪನಿಗಳನ್ನು ನಿಯಂತ್ರಿಸುವ ಕಾನೂನುಗಳನ್ನು ಬಿಗಿ ಮಾಡುತ್ತಿರುವ ಮತ್ತು ಭಾರತದಲ್ಲಿ ಫೇಸ್‌ಬುಕ್ ಮೇಲೆ ಹಲವು ನಿಯಂತ್ರಣ ಹೇರುತ್ತಿರುವ ಮಧ್ಯೆಯೇ ದೇವನಾಥನ್​ ಅವರ ನೇಮಕವಾಗಿದೆ. ಸಂಧ್ಯಾ ದೇವನಾಥನ್ ಅವರು 2016 ರಿಂದ ಮೆಟಾದಲ್ಲಿ ಉದ್ಯೋಗಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!