Sunday, August 14, 2022

Latest Posts

ಕೊನೆ ಉಸಿರು ಇರುವವರೆಗೂ ಕಲಘಟಗಿ ಕ್ಷೇತ್ರದ‌ ಜನರನ್ನು ಮರೆಯೋಲ್ಲ: ಸಂತೋಷ್ ಲಾಡ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಬಳ್ಳಾರಿ:

ಆಯ್ಕೆಯಾದ ಬಳಿಕ ಲಾಡ್ ಅವರು ಕ್ಷೇತ್ರದಲ್ಲೇ ಇರೊಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದು, ಇದು ಶುದ್ಧ ಸುಳ್ಳು, ಯಾವಾಗಲೂ ಜನರ ಮಧ್ಯೆಯೇ ಉಳಿದು ಅವರ ಸೇವೆ ಮಾಡುತ್ತಿರುವೆ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದರು. ಯಾವಾಗಲೂ‌ ಜನರ‌ ಮಧ್ಯೆ ಉಳಿದು ಅವರ ಕಷ್ಟ ಸುಖಗಳಿಗೆ ಸ್ಪಂಧಿಸುವ ಸ್ವಭಾವ ನನ್ನದು, ಆಯ್ಕೆಯಾದ ಬಳಿಕ ಕ್ಷೇತ್ರದಲ್ಲಿ ಸಿಗೊಲ್ಲ‌ ಎನ್ನುವ ಮಾತುಗಳು ಸತ್ಯಕ್ಕೆ ದೂರವಾದದ್ದು, ಕ್ಷೇತ್ರದ ಜನರೇ ನನ್ನ ಉಸಿರು, ಕೊನೆ ಉಸಿರು ಇರುವವರೆಗೂ ಕಲಘಟಗಿ ಜನರನ್ನು ಮರೆಯೋಲ್ಲ. ಕ್ಷೇತ್ರದಲ್ಲೇ ನಿವಾಸ ಮಾಡಿದ್ದು, ಜನರು ಯಾವಾಗ ಬೇಕಾದರೂ ಭೇಟಿಯಾಗಬಹುದು, ಕಳೆದ ಬಾರಿ ಮಾಡಿಕೊಂಡ ಸಣ್ಣ ಪುಟ್ಟ ತಪ್ಪಿನ ಅರಿವಾಗಿದೆ, ಮತ್ತೆ ಅದನ್ನು ಮಾಡೋಲ್ಲ, ಅದನ್ನು ತಿದ್ದಿಕೊಳ್ಳುವೆ ಎಂದರು.
ಕಲಘಟಗಿ ಕ್ಷೇತ್ರದಿಂದಲೇ ಸ್ಪರ್ಧಿಸುವೆ, ಇದರಲ್ಲಿ ಅನುಮಾನವಿಲ್ಲ, ಕೆಲ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಿದ್ದವು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎಲ್ಲವನ್ನು ಸರಿಪಡಿಸಿದ್ದಾರೆ.
ಕಲಘಟಗಿ ಬ್ಲಾಕ್ ಅಧ್ಯಕ್ಷರ ನೇಮಕದ ವಿಚಾರದಲ್ಲಿ ಸ್ಪಲ್ಪ ಗೊಂದಲ ಇತ್ತು, ಅದೆಲ್ಲವನ್ನು‌ ನಾಯಕರು ಸರಿಪಡಿಸಿದ್ದಾರೆ. ನನಗೆ ಪ್ರತಿ ಸ್ಪರ್ಧಿಯಾಗಿ ನಾಗರಾಜ್ ಛಬ್ಬಿ ಅವರನ್ನು ಕೈ‌ನಾಯಕರು ಬೆಳೆಸುತ್ತಿದ್ದಾರೆ ಎನ್ನುವುದು ಸರಿಯಲ್ಲ ಎಂದರು. ಬಳ್ಳಾರಿ ನನ್ನ ‌ಕರ್ಮಭೂಮಿ. ಕ್ಷೇತ್ರ ಪುನರ್ ವಿಂಗಡಣೆ ಮತ್ತು‌ ಮೀಸಲಾತಿಯಿಂದ 2008ರ ಬಳಿಕ ಕಲಘಟಗಿಯಲ್ಲಿ ನನ್ನ ರಾಜಕೀಯ ಜೀವನ ಪ್ರಾರಂಭವಾಗಿದೆ. ಪಕ್ಷ ಬಳ್ಳಾರಿಯ ಜವಾಬ್ದಾರಿ ನೀಡಿದಾಗ ಅದನ್ನು ಸಮರ್ಥವಾಗಿ ನಿರ್ವಹಿಸಿರುವೆ. ಈಗ ಮತ್ತೆ ಡೆತ್ ಆಡಿಟ್ ನಡೆಸಲು ಬಳ್ಳಾರಿ‌ ಗ್ರಾಮೀಣ ಸಮಿತಿಗೆ ನೇಮಕ‌ ಮಾಡಿದೆ. ಈ ಕೆಲಸ ಇಂದಿನಿಂದ ಶುರುಮಾಡಿದೆ.‌ ಪಕ್ಷ ಯಾವ ಜವಾಬ್ದಾರಿ ಕೊಟ್ಟೂರು ನಿಭಾಯಿಸಲು ಸಿದ್ದ ಎಂದರು.
ಈ ಸಂದರ್ಭದಲ್ಲಿ ಸಂಡೂರು ಶಾಸಕ ಈ ತುಕರಾಂ, ಕಾಂಗ್ರೆಸ್ ನ ನಗರ ಜಿಲ್ಲಾ ಸಮಿತಿ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ಜಿ.ಪಂ ಸದಸ್ಯರಾದ ಅಕ್ಷಯ ಲಾಡ್, ಎ.ಮಾನಯ್ಯ, ಮಾಜಿ ಮೇಯರ್ ವೆಂಕಟ ರಮಣ, ವಿವೇಕ್ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss