ಶ್ರೀಲಂಕಾಗೆ ಭಾರತದಿಂದ ಆರ್ಥಿಕ ಸಹಾಯ, ಐಎಂಎಫ್‌ ಶ್ಲಾಘನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆರ್ಥಿಕ ಸಂಕಷ್ಟದಲ್ಲಿರುವ ಶ್ರೀಲಂಕಾಗೆ, ಭಾರತ ನೀಡಿರುವ ಆರ್ಥಿಕ ಸಹಾಯದ ಬಗ್ಗೆ, ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)‌ ಮುಖ್ಯಸ್ಥ ಕ್ರಿಸ್ಟಲಿನಾ ಜಾರ್ಜಿವಾ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮೆರಿಕಾ ಪ್ರವಾಸದಲ್ಲಿರುವ ಭಾರತದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾದಾಗ ಈ ಕುರಿತು ಮೆಚ್ಚುಗೆಯ ಮಾತನಾಡಿದ್ದಾರೆ. ಜೊತೆಗೆ ಐಎಂಎಫ್‌ ಕೂಡಾ ಶ್ರೀಲಂಕಾದೊಂದಿಗೆ ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತದೆ ಎಂಬುದನ್ನು ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಜೊತೆಗೆ ಅತೀವ ಕಷ್ಟದಲ್ಲಿರುವ ನೆರೆಯ ರಾಷ್ಟ್ರ ಶ್ರೀಲಂಕಾಗೆ ಸಹಾಯ ಮಾಡುವುದಾಗಿ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭರವಸೆ ನೀಡಿದ್ದಾರೆ. ಶ್ರೀಲಂಕಾ ಅತ್ಯಂತ ಕೆಟ್ಟ ಪರಿಸ್ಥಿತಿಗಳಲ್ಲಿ ಒಂದಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹಾಗಾಗಿ ಭಾರತವು ಭಾರತವು ಶ್ರೀಲಂಕಾಕ್ಕೆ “ಸಾಧ್ಯವಿರುವ ಎಲ್ಲ ಸಹಕಾರವನ್ನು ನೀಡಲು ಪ್ರಯತ್ನಿಸುತ್ತದೆ” ಎಂಬ ವಿಚಾರವನ್ನು ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ.

ಪ್ರಸ್ತುತ ಸವಾಲುಗಳನ್ನು ನಿಭಾಯಿಸಲು, ನೆರೆಯ ರಾಷ್ಟ್ರ ಇಂಧನ, ಆಹಾರ ಮತ್ತು ಔಷಧಗಳನ್ನು ಖರೀದಿಸಲು ಎರಡು ಸಾಲಗಳನ್ನು ಒಳಗೊಂಡಂತೆ ಭಾರತವು $ 1.5 ಶತಕೋಟಿಗೂ ಹೆಚ್ಚು ಮೌಲ್ಯದ ಆರ್ಥಿಕ ಸಹಾಯವನ್ನು ಈಗಾಗಲೇ ವಿಸ್ತರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!