ASER Report| ಸ್ಕೂಲ್ ಹಾಜರಾತಿಯಲ್ಲಿ ಕರ್ನಾಟಕ, ತಮಿಳುನಾಡು ಉತ್ತಮ, ಉ.ಪ್ರ., ಬಿಹಾರಗಳ ಸ್ಥಿತಿ ಶೋಚನೀಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕುರಿತು ಪ್ರಥಂ ಎಂಬ ಸಂಸ್ಥೆ ನಡೆಸುವ ವಾರ್ಷಿಕ ಶಿಕ್ಷಣ ಸ್ಥಿತಿ ವರದಿ (ASER)ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಉತ್ತಮ ಸ್ಥಾನ ಪಡೆದಿದ್ದರೆ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ತ್ರಿಪುರಾಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ.

ಏಸರ್ 2022 ಸಮೀಕ್ಷೆಯಲ್ಲಿ ಬಹಿರಂಗವಾದ ವಿಚಾರ ಇದು. ಮಕ್ಕಳ ಹಾಜರಾತಿಗಾಗಿ ಅಖಿಲ ಭಾರತ (ಗ್ರಾಮೀಣ) ಅಂಕಿಅಂಶಗಳನ್ನು ಪರಿಗಣಿಸಿದ್ದು, ಇದರ ಪ್ರಕಾರ 72% ವಿದ್ಯಾರ್ಥಿಗಳು ಶಾಲೆಗಳಿಗೆ ಹಾಜರಾಗಿದ್ದು, ಶಿಕ್ಷಕರ ಹಾಜರಾತಿ ಸಂಖ್ಯೆ 85% ಕ್ಕಿಂತ ಸ್ವಲ್ಪ ಹೆಚ್ಚೇ ಇದೆ. ಈ ಅಂಕಿಅಂಶಗಳು ಕೆಲ ರಾಜ್ಯಗಳಲ್ಲಿ ವ್ಯತ್ಯಾಸವಿದ್ದು, ಯುಪಿ, ಎಂಪಿ, ಬಿಹಾರ, ತ್ರಿಪುರಾ ರಾಜ್ಯಗಳು ಕಡಿಮೆ ಹಾಜರಾತಿ ದರವನ್ನು ಹೊಂದಿವೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು 86% ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿರುವುದಾಗಿ ವರದಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!