ಹೊಸ ದಿಗಂತ ವರದಿ, ಮಂಡ್ಯ:
ಎಲ್ಲಾ ಮುಂಚೂಣಿ ಸ್ಕೀಂ ವರ್ಕರ್ಸ್ಗಳಿಗೂ ಸೇವಾ ಖಾಯಮಾತಿ, ಕನಿಷ್ಠ ವೇತನ ಮತ್ತು ಪಿಂಚಣಿ ಹಾಗೂ ಕೊರೋನಾ ಸಮಯದಲ್ಲಿ ಸುರಕ್ಷಾ ಸಾಮಗ್ರಿಗಳು, ಕೋವಿಡ್-19 ಅಪಾಯ ಭತ್ಯೆ ಮತ್ತು ಮರಣ ಪರಿಹಾರಕ್ಕಾಗಿ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಬಳಿ ಜಮಾಯಿಸಿದ ಆಶಾ ಕಾರ್ಯಕರ್ತೆಯರು, ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ನರೇಂದ್ರಮೋದಿ ಅವರಿಗೆ ಮನವಿ ಸಲ್ಲಿಸಿದರು.
ಕೋವಿಡ್ ಸೇವೆಗೆ ನೇಮಿಸಲ್ಪಟ್ಟಿರುವ ಎಲ್ಲಾ ಸ್ಕೀಂ ವರ್ಕ್ರ್ಗಳನ್ನು ಫ್ರಂಟ್ಲೈನ್ ನೌಕರರೆಂದು ಘೋಷಿಸಿ, ಎಲ್ಲರಿಗೂ ಈ ಕೂಡಲೇ ಉಚಿತ ಮತ್ತು ಸಾರ್ವತ್ರಿಕ ಲಸಿಕೆ ಅಭಿಯಾನ ಕೈಗೊಳ್ಳಿ. ಫ್ರಂಟ್ಲೈನ್ ನೌಕರರಿಗೆ ಮೊದಲಾಧ್ಯತೆ ನೀಡಿ. ವಾಕ್ಸಿನ್ ಉತ್ಪಾದನೆ ಹೆಚ್ಚಿಸಿ ಹಾಗೂ ನಿಗಧಿತ ಅವಧಿಯೊಳಗೆ ಸಾರ್ವತ್ರಿಕ ಮತ್ತು ಉಚಿತ ಲಸಿಕೀಕಣವನ್ನು ಖಾತ್ರಿಪಡಿಸಲು ವ್ಯಾಕ್ಸಿನ್ ಹಂಚಿಕೆಯನ್ನು ಸರ್ಕಾರದ ಹಿಡಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಎಲ್ಲಾ ಆರೋಗ್ಯ ಸಿಬ್ಬಂದಿ, ಫ್ರಂಟ್ಲೈನ್ ಹಾಗೂ ಸ್ಕೀಂ ವರ್ಕ್ರ್ಗಳೂ ಸೇರಿದಂತೆ ಮಹಾಮಾರಿ ನಿರ್ವಹಣೆಯಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ಸುರಕ್ಷಾ ಸಾಧನ, ಸಲಕರಣೆ ಇತ್ಯಾದಿಗಳನ್ನು ಖಾತ್ರಿಪಡಿಸಿ, ಎಲ್ಲಾ ಫ್ರಂಟ್ಲೈನ್ ನೌಕರರಿಗೂ ನಿಯತಕಾಲಿಕವಾಗಿ ಉಚಿತ ಕೋವಿಡ್-19 ಪರೀಕ್ಷೆ ನಡೆಸಿ, ಕೋವಿಡ್ ಸೋಂಕಿತ ಫ್ರಂಟ್ಲೈನ್ ನೌಕರರಿಗೆ ಆಸ್ಪತ್ರೆ ಸೇವೆಯಲ್ಲಿ ಮೊದಲಾಧ್ಯೆತ ನೀಡುವಂತೆ ಒತ್ತಾಯಿಸಿದರು.