INSPIRATION | ಕಾಸರಗೋಡಿಗೆ ಕಾಲಿಟ್ರು ಏಕಾಂಗಿ ಸೈಕಲ್ ಸವಾರೆ ಮಧ್ಯಪ್ರದೇಶದ ಆಶಾ ಮಾಳವ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಮಹಿಳಾ ಸುರಕ್ಷತೆ, ಸಬಲೀಕರಣ ಧ್ಯೇಯದೊಂದಿಗೆ ಏಕಾಂಗಿಯಾಗಿ ದೇಶದಲ್ಲಿ ಸೈಕಲ್ ಯಾತ್ರೆ ಹಮ್ಮಿಕೊಂಡಿರುವ   ಮಧ್ಯಪ್ರದೇಶದ ಪರ್ವತಾರೋಹಿ ಆಶಾ ಮಾಳವ್ಯ ಕಾಸರಗೋಡು ತಲುಪಿದ್ದಾರೆ.
ಕರ್ನಾಟಕ ಪ್ರವಾಸದ ಬಳಿಕ ಕೇರಳಕ್ಕೆ ಕಾಲಿಟ್ಟಿರುವ ಅವರನ್ನು ಜಿಲ್ಲಾಡಳಿತ, ಜಿಲ್ಲಾ ಪೋಲೀಸ್, ಜಿಲ್ಲಾ ಪ್ರವಾಸೋದ್ಯಮ ಪ್ರಮೋಷನ್ ಕೌನ್ಸಿಲ್ ಮತ್ತು ಕಾಸರಗೋಡು ಪೆಡ್ಲರ್ಸ್ ಕ್ಲಬ್ ಸ್ವಾಗತಿಸಿತು.

ಶಾಸಕ ಸಿ.ಎಚ್.ಕುಂಞಂಬು, ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಲಕ್ಷ್ಮಿ, ಬೇಕಲ ಎಸ್‌ಐ ರಜನೀಶ್ ಮಾಧವನ್, ಕಾಸರಕೋಡು ಸೈಕ್ಲಿಂಗ್ ಅಸೋಸಿಯೇಶನ್ ಉಪಾಧ್ಯಕ್ಷ ಮೂಸಾ ಪಾಲಕುನ್ನು ಇದ್ದರು.
ಈ ಸಂದರ್ಭ ಮಾತನಾಡಿದ ಅವರು, ಮಹಿಳೆಯರು ಒಂಟಿಯಾಗಿ ಪ್ರಯಾಣಿಸಲು ಭಾರತವು ಸುರಕ್ಷಿತವಾಗಿದೆ ಎಂದರು. 24 ವರ್ಷ ಪ್ರಾಯದ ಆಶಾ ಮಾಳವ್ಯ, ಭಾರತದ ಪ್ರತಿ ರಾಜ್ಯದಲ್ಲಿ 20,000ಕಿ.ಮೀ ಕ್ರಮಿಸುವ ಗುರಿ ಹೊಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!