Tuesday, June 28, 2022

Latest Posts

ಕೊರೋನಾಗೆ ಬಿಹಾರ ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ಸಹೋದರ ಅಶೋಕ್ ಬಲಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾದಿಂದ ಬಿಹಾರ ಮಾಜಿ ಡಿಸಿಎಂ, ಹಾಲಿ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ಅವರ ಸಹೋದರ ಅಶೋಕ್ ಕುಮಾರ್​ ಮೋದಿ (65) ಮೃತಪಟ್ಟಿದ್ದಾರೆ.
‘ನನ್ನ ಕಿರಿಯ ಸಹೋದರ ಅಶೋಕ್ ಕುಮಾರ್ ಮೋದಿ ಕೊರೋನಾ ಸೋಂಕಿನಿಂದಾಗಿ ಇಂದು ಮಧ್ಯಾಹ್ನ 2.45ಕ್ಕೆ ನಿಧನರಾದರು. ಪಾಟ್ನಾದ ವೈದ್ಯರು ಎಲ್ಲ ಪ್ರಯತ್ನ ಮಾಡಿದರೂ ತಮ್ಮನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂಬುದಾಗಿ ಸುಶೀಲ್ ಕುಮಾರ್ ಮೋದಿ ಟ್ವೀಟ್ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss