spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪುನೀತ್ ರಾಜ್‍ಕುಮಾರ್ ಕನಸು ನನಸು ಮಾಡಲು ಹೊರಟ ಪತ್ನಿ ಅಶ್ವಿನಿ!

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಲವಾರು ಕನಸುಗಳನ್ನು ಕಂಡಿದ್ದರು. ಆದರೆ ವಿಧಿಯಾಟದಿಂದ ಇಹಲೋಕ ತ್ಯಜಿಸಿದರು. ಆದರೆ ಈಗ ಅವರ ಕನಸುಗಳನ್ನ ನನಸು ಮಾಡುವ ಜವಾಬ್ದಾರಿಯನ್ನು ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಮರೆಯಲಿಲ್ಲ.
ಪಿಆರ್​ಕೆ ಪ್ರೊಡಕ್ಷನ್​ ಹೌಸ್​, ಗಾಂಧಿನಗರದಲ್ಲಿರುವ ವಜ್ರೇಶ್ವರಿ ಸಂಸ್ಥೆಯ ಕೆಲಸಗಳನ್ನ ಅಶ್ವಿನಿ ಅವರೇ ಮುನ್ನೆಡಸಬೇಕಿದೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಇದರ ಜೊತೆಯಲ್ಲಿ, ಪುನೀತ್ ಬದುಕಿದ್ದಾಗ ಕರುನಾಡ ಕುರಿತು ಡಾಕ್ಯುಮೆಂಟರಿ ಮಾಡಿರುವ ಬಗ್ಗೆ ಸುಳಿವು ನೀಡಿದ್ದರು. ‘ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದು ಅಕ್ಟೋಬರ್​ 27ರಂದು ಪುನೀತ್​ ಟ್ವಟರ್​​ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ, ನವೆಂಬರ್​ 1ಕ್ಕಾಗಿ ಕಾಯಿರಿ ಎಂದು ಹೇಳಿದ್ದರು.
2019ರಲ್ಲಿ ತೆರೆಕಂಡ ‘ವೈಲ್ಡ್ ಕರ್ನಾಟಕ’ ಡಾಕ್ಯುಮೆಂಟರಿ ನಿರ್ದೇಶಕ ಅಮೋಘವರ್ಷ ಅವರ ಜೊತೆ ಸೇರಿ ಕರುನಾಡ ಬಗ್ಗೆ ‘ಗಂಧದಗುಡಿ’ ಹೆಸರಿನ ಡಾಕ್ಯುಮೆಂಟರಿ ಒಂದನ್ನು ಸಿದ್ಧಪಡಿಸಿದ್ದರು. ರಾಜ್ಯದ ನಾನಾ ಕಡೆಗಳಲ್ಲಿ ಭೇಟಿ ನೀಡಿ ಇದನ್ನು ಶೂಟ್​ ಮಾಡಲಾಗಿತ್ತು. ಪುನೀತ್​ ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ. ನವೆಂಬರ್​ 1 ರಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆ ಅದೇ ದಿನ ಈ ಡಾಕ್ಯುಮೆಂಟರಿಯ ಟೀಸರ್​ ಬಿಡುಗಡೆ ಮಾಡಲು ಅಪ್ಪು ನಿರ್ಧರಿಸಿದ್ದರು. ಆದರೆ, ಕನಸು ನನಸಾಗುವ ಮೊದಲೇ ಅವರು ಮೃತಪಟ್ಟರು.
ಆದರೆ ಈಗ ಈ ಬಗ್ಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಟ್ವೀಟ್​ ಮಾಡಿದ್ದು, “ಅಪ್ಪು ಅವರ ಕನಸೊಂದು 01.11.2021 ರಂದು ಬೆಳಕು ಕಾಣಬೇಕಿತ್ತು. ಆದರೆ ಆ ಕನಸಿಗಿದು ಅಲ್ಪವಿರಾಮವಷ್ಟೇ, ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ’ ಎಂದು ಬರೆದುಕೊಂಡಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss