ಹೊಸದಿಗಂತ ಡಿಜಿಟಲ್ ಡೆಸ್ಕ್
ಏಷ್ಯಾದ ಬಲಾಡ್ಯ ಕ್ರಿಕೆಟ್ ರಾಷ್ಟ್ರಗಳ ನಡುವಿನ ಹಣಾಹಣಿಯಾದ ಏಷ್ಯಾಕಪ್ ನ ದಿನಾಂಕಗಳನ್ನು ಬಲಾವಣೆ ಮಾಡಲಾಗಿದೆ.
ಈ ಪಂದ್ಯಾವಳಿಯು ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಆಗಸ್ಟ್ 24 ರಿಂದ ಪ್ರಾರಂಭಗೊಳ್ಳುತ್ತಿದ್ದು, ಸೆಪ್ಟೆಂಬರ್ 7 ರಂದು ಫೈನಲ್ ಪಂದ್ಯ ಆಯೋಜಿಸಲಾಗಿದೆ. ಟಿ20 ವಿಶ್ವಕಪ್ ಸನಿಹದಲ್ಲಿರುವುದರಿಂದ ಈ ಬಾರಿ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಪಂದ್ಯಾವಳಿ ನಡೆಸಲು ತೀರ್ಮಾನಿಸಲಾಗಿದೆ.
ಇದಕ್ಕೂ ಮುನ್ನ, ಮಾರ್ಚ್ 19 ರಂದು ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಆ. 27 ರಿಂದ ಸೆ. 11 ರವರೆಗೆ ಏಷ್ಯಾ ಕಪ್ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಟೂರ್ನಿ ನಿಗದಿಯಾದಂತೆ ಶ್ರೀಲಂಕಾದಲ್ಲಿಯೇ ನಡೆಯಲಿದೆಯೆ ಎಂಬುದರ ಬಗ್ಗೆ ಸಂಪೂರ್ಣ ಖಚಿತತೆ ಇಲ್ಲ. ಶ್ರೀಲಂಕಾದಲ್ಲಿನ ಇತ್ತೀಚಿನ ಆರ್ಥಿಕ ಅಸ್ಥಿರತೆಯು ಟೂರ್ನಿ ಸ್ಥಳ ಬದಲಾವಣೆಗೆ ಕಾರಣವಾಗುವು ಸಂಭವವಿದ್ದು, ಒಂದೊಮ್ಮೆ ಟೂರ್ನಿ ಶ್ರಿಲಂಕಾ ಕೈತಪ್ಪಿದರೆ ಯುನೈಟೆಡ್ ಅರಬ್ ಎಮಿರೇಟ್ಸ್ ಟೂರ್ನಿಗೆ ಆತಿಥ್ಯ ವಹಿಸುವ ಭಾಗ್ಯ ಸಿಗಲಿದೆ. ಈ ಬಗ್ಗೆ ಏಷ್ಯನ್ ಕ್ರಿಕೆಟ್ ಕೌಂನ್ಸಿಲ್ ಶೀಘ್ರವೇ ತೀರ್ಮಾನ ಕೈಗೊಳ್ಳಲಿದೆ.
1984 ರರಿಂದ ಆಯೋಜನೆಗೊಳ್ಳುತ್ತಿರುವ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತವು 7 ನೇ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಗೆದ್ದುಕೊಂಡಿತು. 5 ಪ್ರಶಸ್ತಿಗಳನ್ನು ಗೆದ್ದಿರುವ ಶ್ರೀಲಂಕಾ ಎರಡನೇ ಅತ್ಯಂತ ಯಶಸ್ವಿ ತಂಡವಾಗಿದೆ. ಪಾಕಿಸ್ತಾನ 2 ಚಾಂಪಿಯನ್‌ಶಿಪ್ ಗಳನ್ನು ಗೆದ್ದಿದೆ. ಈ ಬಾರಿಯ ಟೂರ್ನಿಗೆ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ದೇಶಗಳು ನೇರ ಅರ್ಹತೆ ಸಂಪಾದಿಸಿವೆ. ಇನ್ನೊಂದು ಸ್ಥಾನಕ್ಕಾಗಿ, ಹಾಂಗ್ ಕಾಂಗ್, ಯುಎಇ, ಕುವೈತ್ ಮತ್ತು ಸಿಂಗಾಪುರ ತಂಡಗಳು ಅರ್ಹತಾ ಸುತ್ತಿನಲ್ಲಿ ಹಣಾಹಣಿ ನಡೆಸಲಿವೆ.