ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2021ರಲ್ಲಿ ಜಪಾನ್ ವಿರುದ್ಧ ಭಾರತೀಯ ಪುರುಷರ ಹಾಕಿ ತಂಡ ಸೆಮಿಫೈನಲ್ನಲ್ಲಿ ಸೋಲು ಅನುಭವಿಸಿದೆ. ಜಪಾನ್ ಭಾರತವನ್ನು 5-3 ಅಂತರದಿಂದ ಸೋಲಿಸಿದೆ. ಭಾರತದ ಫೈನಲ್ ಕನಸು ಭಗ್ನವಾಗಿದ್ದು, ಕಂಚಿನ ಪದಕಕ್ಕಾಗಿ ಪಾಕ್ ಎದುರು ಸೆಣೆಸಾಡಬೇಕಿದೆ.
ಪಂದ್ಯ ಆರಂಭಕ್ಕೂ ಮುನ್ನ ಭಾರತದ ಗೆಲುವಿನ ಬಗ್ಗೆ ಭಾರೀ ನಿರೀಕ್ಷೆ ವ್ಯಕ್ತವಾಗಿತ್ತು. ಜಪಾನ್ ಎದುರು ಭಾರತ ಪ್ರಬಲ ಸ್ಪರ್ಧಿ ಎಂದೇ ಪರಿಗಣಿಸಲಾಗಿತ್ತು. ಭಾರತ ಮತ್ತು ಜಪಾನ್ ಈ ಮೊದಲು 18 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ 16 ಪಂದ್ಯಗಳನ್ನು ಭಾರತವೇ ಗೆದ್ದಿದೆ. ಇನ್ನೊಂದು ಪಂದ್ಯ ಡ್ರಾ ಆಗಿದ್ದು, ಒಂದು ಪಂದ್ಯದಲ್ಲಿ ಮಾತ್ರ ಭಾರತ ಸೋಲು ಅನುಭವಿಸಿತ್ತು.
ಇಂದು ಪಾಕ್ ಎದುರು ಕಂಚಿನ ಪದಕಕ್ಕಾಗಿ ಭಾರತ ಸೆಣೆಸಾಡಬೇಕಿದೆ. ಇತ್ತ ಜಪಾನ್ಗೆ ದಕ್ಷಿಣ ಕೊರಿಯಾ ಎದುರಾಳಿಯಾಗಿದೆ.