ನಿಮ್ಮ ಅಪ್ಪನ ಫೋಟೊ ಬಳಸಿ ಮತ ಕೇಳಿ, ನನ್ನ ಫೊಟೋ ಬಳಸಿ ಅಲ್ಲ: ‘ಮಹಾ’ ಸಿಎಂ ವಿರುದ್ಧ ಗುಡುಗಿದ ಉದ್ಧವ್ ಠಾಕ್ರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಮಹಾರಾಷ್ಟ್ರದ ಹಾಲಿ ಸಿಎಂ ಏಕನಾಥ್ ಶಿಂಧೆ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡುವೆ ಶಿವ ಸೇನೆ ಪಕ್ಷದ ಬಿಲ್ಲು ಬಾಣದ ಚಿಹ್ನೆ ಬಳಸಲುಪೈಪೋಟಿ ನಡೆಯುತ್ತಿದೆ.

ಶಿಂಧೆ ಬಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಉದ್ಧವ್ ಠಾಕ್ರೆ, ತನ್ನ ತಂದೆ ಬಾಳಾ ಠಾಕ್ರೆ ಫೋಟೋಗಳನ್ನು ಬಳಸಿ ಮತ ಭಿಕ್ಷೆ ಪಡೆದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಮೂಲಕ ನಿಮ್ಮ ತಂದೆಯ ಫೋಟೋಗಳನ್ನು ಬಳಸಿಕೊಂಡು ಮತ ಕೇಳಿ ನಮ್ಮ ತಂದೆಯ ಫೊಟೋಗಳನ್ನು ಬಳಸಿಕೊಂಡು ಅಲ್ಲ ಎಂದು ನೇರವಾಗಿಯೇ ಶಿಂಧೆ ಬಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಸೇನೆಯ ಮುಖವಾಣಿ ಸಾಮ್ನಾಗೆ ಸಂದರ್ಶನದಲ್ಲಿ ಮಾತನಾಡಿರುವ ಉದ್ಧವ್ ಠಾಕ್ರೆ, ‘ಶಿವಸೇನೆಯ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಚಿತ್ರಗಳನ್ನು ಬಳಸಿಕೊಂಡು ಮತಕ್ಕಾಗಿ ಭಿಕ್ಷೆ ಬೇಡುತ್ತಿದ್ದಾರೆ ಅವರು ನನಗೆ ದ್ರೋಹ ಮಾಡಿದ್ದಾರೆ, ಪಕ್ಷವನ್ನು ಒಡೆದಿದ್ದಾರೆ. ಅವರ ತಂದೆಯ ಚಿತ್ರಗಳನ್ನು ಬಳಸಿ ಮತ ಕೇಳಬೇಕು. ಶಿವಸೇನೆಯ ತಂದೆಯ ಚಿತ್ರಗಳನ್ನು ಬಳಸಿಕೊಂಡು ಮತ ಭಿಕ್ಷೆ ಬೇಡುವುದನ್ನು ನಿಲ್ಲಿಸಲಿ ಎಂದು ಹೇಳಿದ್ದಾರೆ.

ನನಗೆ ಅನಾರೋಗ್ಯ ಕಾಡುತ್ತಿದ್ದಾಗ ಪಕ್ಷದ ಜವಾಬ್ದಾರಿಯನ್ನು ಏಕನಾಥ್ ಶಿಂಧೆಗೆ ನೀಡಿದ್ದೆ. ಆದರೆ ಅಂತಹ ಸೂಕ್ಷ್ಮ ಸಮಯದಲ್ಲೂ ಅವರು ನನಗೆ ದ್ರೋಹ ಮಾಡಿದರು.

ಉದ್ಧವ್ ಠಾಕ್ರೆ ನವೆಂಬರ್ 2021 ರಲ್ಲಿ ಅವರ ಕುತ್ತಿಗೆ ಮತ್ತು ಬೆನ್ನುಮೂಳೆಯ ಸಮಸ್ಯೆಗಳಿಗಾಗಿ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಒಂದು ವಾರದ ಅಂತರದಲ್ಲಿ ಎರಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ನನ್ನ ಸರ್ಕಾರ ಹೋಯಿತು, ಮುಖ್ಯಮಂತ್ರಿ ಸ್ಥಾನ ಹೋಯಿತು, ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ಆದರೆ ನನ್ನ ಸ್ವಂತ ಜನರೇ ದೇಶದ್ರೋಹಿಗಳಾದರು. ನನ್ನ ಶಸ್ತ್ರಚಿಕಿತ್ಸೆಯಿಂದ ನಾನು ಚೇತರಿಸಿಕೊಳ್ಳುತ್ತಿರುವಾಗ ಅವರು ನನ್ನ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದರು ಎಂದಿದ್ದಾರೆ.

ಬಂಡಾಯ ಶಿವಸೇನೆ ನಾಯಕರನ್ನುದೇಶದ್ರೋಹಿಗಳುಎಂದು ಕರೆದ ಠಾಕ್ರೆ, ಹೊಸ ಎಲೆಗಳಿಗೆ ದಾರಿ ಮಾಡಿಕೊಡಲು ಮರಗಳಿಂದ ಬೀಳುವ ಕೊಳೆತ ಎಲೆಗಳಿಗೆ ಹೋಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!