Wednesday, August 10, 2022

Latest Posts

ಅಸ್ಸಾಂ ಉಪಚುನಾವಣೆ: ಎಲ್ಲ 5 ಸ್ಥಾನಗಳಲ್ಲೂ ಬಿಜೆಪಿ ಪ್ರಚಂಡ ಜಯಭೇರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಮಿನಲ್ಲಿ ಶನಿವಾರ ಉಪಚುನಾವಣೆ ನಡೆದ ಎಲ್ಲ 5 ಸ್ಥಾನಗಳಲ್ಲೂ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಯುಪಿಪಿಎಲ್ ಪ್ರಚಂಡ ಜಯ ಸಾಸಿವೆ. ಈ ಮೂಲಕ ಅಸ್ಸಾಮಿನಲ್ಲಿ ಬಿಜೆಪಿ ಇನ್ನಷ್ಟು ಭದ್ರಗೊಂಡಂತಾಗಿದೆ.
ಬಿಜೆಪಿಯ ಸುಶಾಂತ ಬೊರ್ಗೊಹೈನ್ (54,956)ಅವರು ತೋವ್ರಾ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿ ಧೈಜ್ಯಾ ಕೊನ್ವರ್(24,395) ಅವರನ್ನು ಸೋಲಿಸಿ 30,561 ಮತಗಳ ಭಾರೀ ಅಂತರದಿಂದ ಗೆಲುವು ಸಾಸಿದ್ದಾರೆ. (38,559)ಅವರನ್ನು ಸೋಲಿಸಿ ಗೆದ್ದರೆ, ಮಾರಿಯಾನಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೂಪ್‌ಜ್ಯೋತಿ ಕುರ್ಮಿ55,489 ಮತಗಳು) ಅವರು ಕಾಂಗ್ರೆಸ್ ಅಭ್ಯರ್ಥಿ ಲುಹಿತ್ ಕೊನ್ವರ್ (15,385 ಮತಗಳು) ಅವರನ್ನು 40, 104 ಮತಗಳ ಅಂತರದಿಂದ ಸೋಲಿಸಿ ಪ್ರಚಂಡ ಜಯವನ್ನು ದಾಖಲಿಸಿದರು. ಹಾಗೆಯೇ ಮಿತ್ರಪಕ್ಷ ಯುಪಿಪಿಎಲ್‌ನ ಅಭ್ಯರ್ಥಿ ಜಿರೋನ್ ಬಸುಮತಾರಿ ಮತ್ತು ಜೊಲೆನ್ ಡೈಮಾರಿ ಅವರು ಗೊಸ್ಸೈಗಾಂವ್ ಮತ್ತು ತಮುಲ್‌ಪುರ್ ಕ್ಷೇತ್ರಗಳಲ್ಲಿ ಅನುಕ್ರಮವಾಗಿ 28,252 ಮತ್ತು 50 ಸಾವಿರ ಮತಗಳ ಬೃಹತ್ ಅಂತರದಿಂದ ಕಾಂಗ್ರೆಸ್ ಮತ್ತು ಸ್ವತಂತ್ರ ಅಭ್ಯರ್ಥಿಗಳೆದುರು ಗೆಲುವು ಸಾಸಿದರು. ಭವಾನಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಫಾನಿಧರ್ ತಾಲೂಕ್‌ದಾರ್ (64,200)ಅವರು 25,641ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಶೈಲೇಂದ್ರ ನಾಥ್ ದಾಸ್(38559)ಅವರನ್ನು ಸೋಲಿಸಿ ಆಯ್ಕೆಯಾದರು.
ಅಸ್ಸಾಮ್ ವಿಧಾನಸಭೆಯ ೫ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು ಭಾರೀ ಗೆಲುವು ಸಾಸಿದ್ದು, ಅಸ್ಸಾಮಿನ ಜನತೆ ಬಿಜೆಪಿಯಲ್ಲಿ ಇಟ್ಟಿರುವ ವಿಶ್ವಾಸದ ದ್ಯೋತಕ . ಈ ಗೆಲುವಿನಲ್ಲಿ ಮಾರ್ಗದರ್ಶನಗೈದ ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಹಾಗೂ ಅಸ್ಸಾಮ್ ಜನತೆಗೆ ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss