ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲ್ಯ ವಿವಾಹ ವಿರುದ್ಧ ಅಖಾಡಕ್ಕೆ ಇಳಿದ ಅಸ್ಸಾಂ ಸಿಎಂ, ಅಪರಾಧಿಗಳನ್ನು ಬಂಧಿಸಿ ಬೃಹತ್ ಜಾಗೃತಿ ಅಭಿಯಾನವನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿದ್ದು, ಅದರಂತೆ ಇದೀಗ 1,800 ಮಂದಿಯನ್ನು ಬಂಧಿಸಲಾಗಿದೆ.
ಅಸ್ಸಾಂನಲ್ಲಿ ಕಳೆದ ಹದಿನೈದು ದಿನಗಳೊಳಗೆ 4,004 ಬಾಲ್ಯ ವಿವಾಹ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ಮದುವೆಯಾಗುವವರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯಡಿ ಮತ್ತು 14-18 ವರ್ಷದೊಳಗಿನ ವಿವಾಹಿತರನ್ನು ಬಾಲ್ಯ ವಿವಾಹ ನಿಷೇಧ ಕಾಯಿದೆ, 2006ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ.
ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಮಾತನಾಡಿ ಇಲ್ಲಿಯವರೆಗೂ ಅಸ್ಸಾಂ ಪೊಲೀಸರು ರಾಜ್ಯಾದ್ಯಂತ ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಇದುವರೆಗೆ 1,800 ಜನರನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು ರಾಜ್ಯ ಸಚಿವ ಸಂಪುಟವು ಬಾಲ್ಯ ವಿವಾಹದ ಪಿಡುಗಿನ ವಿರುದ್ಧ ಬೃಹತ್ ಶಿಸ್ತುಕ್ರಮವನ್ನು ಪ್ರಾರಂಭಿಸಲು ನಿರ್ಧರಿಸಿತ್ತು. ಧುಬ್ರಿ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಗರಿಷ್ಠ ಪ್ರಕರಣಗಳು ದಾಖಲು ಬಾಲ್ಯವಿವಾಹ ಕಾಯ್ದೆಯಡಿ ದಾಖಲಾದ ಈ 4004 ಪ್ರಕರಣಗಳ ಕುರಿತು ಮಾತನಾಡಿದರೆ 15 ಜಿಲ್ಲೆಗಳ ಪೈಕಿ ಧುಬ್ರಿ ಜಿಲ್ಲೆಯಲ್ಲಿ ಗರಿಷ್ಠ 370 ಪ್ರಕರಣಗಳು ದಾಖಲಾಗಿವೆ. ಕಮಿಷನರೇಟ್ನಲ್ಲಿ ಎರಡನೇ ಸಂಖ್ಯೆಯಲ್ಲಿ 192 ಮತ್ತು ಗೋಲ್ಪಾರಾ ಜಿಲ್ಲೆಯಲ್ಲಿ ಮೂರನೇ ಸಂಖ್ಯೆಯಲ್ಲಿ 157 ಪ್ರಕರಣಗಳಿವೆ.