ಬಿಹು ಉತ್ಸವಕ್ಕೆ ಸಜ್ಜಾಗ್ತಿದೆ ಅಸ್ಸಾಂ, ಈ ಹಬ್ಬದ ಸ್ಪೆಶಾಲಿಟಿ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂ ಜನತೆ ವಿಜೃಂಭಣೆಯಿಂದ ಆಚರಿಸುವ ಹಬ್ಬ ಬಿಹು ಉತ್ಸವ. ಇದನ್ನು ಬೋಹಾಗ್ ಬಿಹು, ರೊಂಗಾಲಿ ಬಿಹು ಎಂದೂ ಕರೆಯುತ್ತಾರೆ.

ಹೊಸ ವರ್ಷ ಹಾಗೂ ವಸಂತ ಋತುವಿನ ಆಗಮನದ ಸೂಚನೆಯಾಗಿ ಈ ಹಬ್ಬವನ್ನು ಮಾಡಲಾಗುತ್ತದೆ. ಬಿಹು ಉತ್ಸವದ ಕಳೆಯನ್ನು ಹೆಚ್ಚಿಸಲು ಪ್ರಧಾನಿ ಮೋದಿ ಕೂಡ ಇಲ್ಲಿ ಭಾಗಿಯಾಗಲಿದ್ದಾರೆ.

11 ಸಾವಿರಕ್ಕೂ ಹೆಚ್ಚು ನೃತ್ಯ ಕಲಾಕಾರರು ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಯತ್ನವೂ ಇದಾಗಿರಲಿದೆ. ಈ ಉತ್ಸವದ ಇನ್ನೊಂದು ಪ್ರಮುಖ ಆಕರ್ಷಣೆ ಜಾನಪದ ಸಂಗೀತ ವಾದ್ಯಗಳ ಮಾರಾಟವಾಗಿದೆ.

ಏಳು ದಿನಗಳ ಕಾಲ ನಡೆಯುವ ಈ ಆಚರಣೆ ಸಮಯದಲ್ಲಿ ಊರಿಗೇ ಊರೇ ಖುಷಿಯ ವಾತಾವರಣದಲ್ಲಿರುತ್ತದೆ, ನಾನಾ ಕಾದ್ಯ ತಯಾರಿ, ಕೃಷಿ ಭೂಮಿ ತಯಾರಿಯಲ್ಲಿ ಜನ ನಿರತರಾಗುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!