1,183 ಕೆಜಿ ಗಾಂಜಾ ವಶಪಡಿಸಿಕೊಂಡ ಅಸ್ಸಾಂ ಪೋಲೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಸ್ಸಾಂ-ತ್ರಿಪುರಾ ಗಡಿ ಪ್ರದೇಶದಲ್ಲಿ ಲಾರಿಯೊಂದರಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ 1,183 ಕೆಜಿ ಗಾಂಜಾವನ್ನು ಅಸ್ಸಾಂ ಪೋಲೀಸರು ವಶಪಡಿಸಿಕೊಂಡಿದ್ದಾರೆ.

ಸೋಮವಾರ ರಾತ್ರಿ ಅಸ್ಸಾಂ -ಸಿಕ್ಕಿಂ ಗಡಿ ಪ್ರದೇಶದ ಕರೀಂ ಗಂಜ್‌ನಲ್ಲಿ ಗಸ್ತಿನಲ್ಲಿದ್ದ ಪೋಲೀಸರು ವಾಹನ ತಪಾಸಣೆ ನಡೆಸುವ ವೇಳೆ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗಾಂಜಾ ಪತ್ತೆಯಾಗಿದ್ದು ಲಾರಿಚಾಲಕ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ವಸೀಮ್‌(20) ಮತ್ತು ವಾಸೀಂ(18) ಎಂದು ಗುರುತಿಸಲಾಗಿದ್ದು ಲಾರಿ ಅಸ್ಸಾಂನ ಗುವಾಹಟಿ ಕಡೆಯಿಂದ ಬರುತ್ತಿತ್ತು ಎನ್ನಲಾಗಿದೆ.

ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!