ಜಿಗ್ನೇಶ್‌ ಮೇವಾನಿಗೆ ಜಾಮಿನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಅಸ್ಸಾಂ ಪೋಲೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಸ್ಸಾಂನಲ್ಲಿ ಜಿಗ್ನೇಶ್‌ ಮೇವಾನಿ ಬಂಧನದ ನಂತರ ಸ್ಥಳೀಯ ನ್ಯಾಯಾಲಯದ ಜಾಮೀನು ಪಡೆದು ಮೇವಾನಿ ಹೊರಬಂದಿರುವ ಬೆನ್ನಲ್ಲೇ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಪೊಲೀಸ್‌ ತನಿಖಾಧಿಕಾರಿ ಹೈ ಕೋರ್ಟ್‌ ಮೆಟ್ಟಿಲೇರಿದ್ಧಾರೆ.

ಸರ್ಕಾರಿ ವಕೀಲರ ಮೂಲಕ ಜಿಗ್ನೇಶ್‌ ಮೇವಾನಿಗೆ ಜಾಮೀನು ನೀಡಿರುವ ಸ್ಥಳೀಯ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬಾರ್ಪೇಟಾ ರಸ್ತೆ ಪೋಲೀಸ್‌ ಸ್ಟೇಷನ್ ನ ಅಧಿಕಾರಿ ಗುವಾಹಟಿ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ಧಾರೆ.

ಈ ಕುರಿತು ಅಸ್ಸಾಂ ನ ಅಡ್ವೋಕೇಟ್‌ ಜನರಲ್‌ ಪ್ರತಿಕ್ರಿಯೆ ನೀಡಿದ್ದು “ಬಾರ್ಪೇಟಾ ಪೋಲೀಸ್‌ ಠಾಣೆಯಲ್ಲಿ ಜಿಗ್ನೇಶ್‌ ಮೇವಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯವು ಜಾಮೀನು ನೀಡಿರುವುದಲ್ಲದೇ ಅಸ್ಸಾಂ ಪೋಲೀಸ್‌ ರಾಜ್ಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ ಪೋಲೀಸ್‌ ಇಲಾಖೆಯ ಕರ್ತವ್ಯದ ಬಗ್ಗೆ ಪ್ರಶ್ನೆ ಮಾಡಿದೆ. ಇದು ಪೋಲೀಸ್‌ ಇಲಾಖೆಯ ಕಾರ್ಯದಕ್ಷತೆಯ ನೈತಿಕ ಕುಸಿತಕ್ಕೆ ಕಾರಣವಾಗುತ್ತದೆ. ಹಾಗಾಗಿ ಜಿಲ್ಲಾ ನ್ಯಾಯಾಧೀಶರ ಆದೇಶವನ್ನು ಹೈಕೋರ್ಟ್‌ ನಲ್ಲಿ ಪ್ರಶ್ನಿಸಲು ಅಸ್ಸಾಂ ಸರ್ಕಾರ ಮುಂದಾಗಿದೆ” ಎಂದು ಹೇಳಿರುವ ಕುರಿತು ಮೂಲಗಳು ವರದಿನ ಮಾಡಿವೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!