Monday, July 4, 2022

Latest Posts

ಕ್ಷುಲ್ಲಕ ಕಾರಣಕ್ಕೆ ಪಾಲಿಕೆ ಆಯುಕ್ತರ ಮೇಲೆ ಹಲ್ಲೆ: ಓರ್ವ ಆರೋಪಿ ಬಂಧನ

ಹೊಸದಿಗಂತ ವರದಿ, ವಿಜಯಪುರ:

ಕ್ಷುಲ್ಲಕ ಕಾರಣಕ್ಕೆ ಮಹಾನಗರ ಪಾಲಿಕೆ ಆಯುಕ್ತರ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಸಮರ್ಥ ಸಿಂದಗಿ ಬಂಧಿತ ಆರೋಪಿ.
ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರ ಮೇಲೆ, ಇಲ್ಲಿನ ಸೊಲ್ಲಾಪುರ ರಿಂಗ್ ರೋಡಿನ ಬಳಿ ಸಮರ್ಥ ಸಿಂದಗಿ ಸೇರಿ ಐದು ಜನರು ಹಲ್ಲೆ ಮಾಡಿದ್ದು, ಆರೋಪಿ ಸಮರ್ಥ ನನ್ನು ಪೊಲೀಸರು ಬಂಧಿಸಿದ್ದು, ಪರಾರಿಯಾದ ನಾಲ್ಕು ಜನರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಈ ಸಂಬಂಧ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss