Saturday, August 13, 2022

Latest Posts

ವಿಧಾನಸಭಾ ಚುನಾವಣೆ: ಕಾಸರಗೋಡು ಜಿಲ್ಲೆಯಲ್ಲಿ ನಿಷ್ಪಕ್ಷಪಾತ, ಸುಧಾರಿತ ಚುನಾವಣೆ ನಡೆಸಲು ರಾಜಕೀಯ ಪಕ್ಷಗಳ ಬೆಂಬಲ

ಹೊಸ ದಿಗಂತ ವರದಿ, ಕಾಸರಗೋಡು:

ವಿಧಾನಸಭಾ ಚುನಾವಣೆಯ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ನಿಷ್ಪಕ್ಷಪಾತ, ಸುಧಾರಿತ ಚುನಾವಣೆ ನಡೆಸಲು
ರಾಜಕೀಯ ಪಕ್ಷಗಳು ಬೆಂಬಲ ಘೋಷಿಸಿವೆ. ಜಿಲ್ಲಾಧಿಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಈ ಅಭಿಮತ ವ್ಯಕ್ತವಾಗಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಚುನಾವಣೆಯ ಪೂರ್ವಭಾವಿಯಾಗಿ ನಡೆಸಿದ ಸಿದ್ಧತೆಗಳ, ಕಾನೂನುಪಾಲನೆ, ಕೈಗೊಳ್ಳಬೇಕಾದ ಜಾಗರೂಕತೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಈ ಹಿಂದಿನ ಚುನಾವಣೆಗಳಲ್ಲಿ ನೀಡಿರುವ ಮಾದರಿ ರೂಪದ ಬೆಂಬಲ ಈ ಬಾರಿಯ ಚುನಾವಣೆಯಲ್ಲೂ ನೀಡುವಂತೆ ಅವರು ವಿನಂತಿಸಿದರು.
ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಸಿ.ಎಚ್.ಕುಂಞಬು, ಕೆ.ಆರ್.ಜಯಾನಂದ, ನ್ಯಾಯವಾದಿ ಗೋವಿಂದನ್ ಪಳ್ಳಿಕ್ಕಾಪಿಲ್, ಎಂ.ಕುಂಞಬು ನಂಬ್ಯಾರ್, ಮ್ಯಾನುವೆಲ್ ಮೇಲತ್, ಮೂಸಾ ಬಿ. ಚೆರ್ಕಳ, ನ್ಯಾಷನಲ್ ಅಬ್ದುಲ್ಲ , ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಸಾಮುವೆಲ್ ಫೆರ್ನಾಂಡಿಸ್, ಹೆಚ್ಚುವರಿ ದಂಡನಾಧಿಕಾರಿ ಅತುಲ್ ಎಸ್.ನಾಥ್, ಹಣಕಾಸು ಅಧಿಕಾರಿ ಕೆ.ಸತೀಶನ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss