ವಿಧಾನಸಭೆ ಚುನಾವಣೆ : ಒಟ್ಟು 4,989 ನಾಮಪತ್ರಗಳು ಕ್ರಮಬದ್ಧ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭಾ ಚುನಾವಣೆಗೆ ರಾಜ್ಯಾದ್ಯಂತ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರ ಮುಕ್ತಾಯಗೊಂಡಿದೆ. ಮೇ.10 ರಂದು ಮತದಾನ ನಡೆಯಲಿದ್ದು, ನಿನ್ನೆ ನಾಮಪತ್ರ ಪರಿಶೀಲನೆ ನಂತರ ಒಟ್ಟಾರೆ 4,989 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ರಾಜ್ಯಾದ್ಯಂತ ಒಟ್ಟಾರೆ ಐದು ಸಾವಿರಕ್ಕೂ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 500 ಕ್ಕೂ ಹೆಚ್ಚು ನಾಮಪತ್ರಗಳು ತಿರಸ್ಕೃತಗೊಂಡಿವೆ. ಒಟ್ಟು 3,632 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 3.044 ಅಭ್ಯರ್ಥಿಗಳ 4,989 ನಾಮಪತ್ರಗಳು ಮಾತ್ರ ಕ್ರಮಬದ್ಧವಾಗಿದೆ.

ಇನ್ನು ಸವದತ್ತಿ, ಔರಾದ್, ಹಾವೇರಿ, ರಾಯಚೂರು ಮತ್ತು ಶಿವಾಜಿನಗರ ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಮಾತ್ರ ಬಾಕಿ ಇದೆ ಎಂದು ಚುನಾವಣಾ ಆಯೋಗ ಹೇಳಿದೆ. ನಾಮಪತ್ರ ಹಿಂಪಡೆಯಲು ಏ.24 ಕೊನೆಯ ದಿನವಾಗಿದ್ದು, ತದನಂತರ ಕಣದಲ್ಲಿ ಉಳಿಯುವ ಸ್ಪರ್ಧಿಗಳ ಸಂಖ್ಯೆ ತಿಳಿಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!