ಹೃದಯಾಘಾತದಿಂದ ಅಸ್ಸೋಂ ಬಾಲ ಕಲಾವಿದೆ ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಜೌಲಿಯಲ್ಲಿ ಬುಧವಾರ ಸಂಜೆ ಹೃದಯಾಘಾತವಾಗಿ ಬಾಲ ಕಲಾವಿದೆ ಸಾವನ್ನಪ್ಪಿದ್ದಾರೆ. ಈ ಅಕಾಲಿಕ ಮರಣವು ದ್ವೀಪದ ಜನರನ್ನು ದುಃಖಿತರನ್ನಾಗಿಸಿದೆ.
ಮಜೌಲಿಯ ಜನಪ್ರಿಯ ಗಾಯಕಿ ತೇಜಸ್ವಿತಾ ಬೋರಾ (14) ಮೃತ ಬಾಲಕಿ. ಮಜೌಲಿಯಲ್ಲಿ ನಡೆದ ಸಂಕರ್​​ದೇವ್ ಜಯಂತಿ ಉತ್ಸವದಲ್ಲಿ ತಮ್ಮ ಪ್ರದರ್ಶನಕ್ಕೂ ಮೊದಲು ತೀವ್ರ ಹೃದಯಾಘಾತಕ್ಕೆ ಒಳಗಾದರು. ಉತ್ಸವದ ಸ್ಥಳದಲ್ಲಿ ಆಕ್ಸಿಜನ್ ಸಿಲಿಂಡರ್‌ಗಳು ಲಭ್ಯವಿಲ್ಲದ ಹಿನ್ನೆಲೆ ಆಕೆಯನ್ನು ತಕ್ಷಣವೇ ಗೋರ್ಮುರ್‌ನಲ್ಲಿರುವ ಶ್ರೀ ಪಿತಾಂಬರ ದೇವ ಗೋಸ್ವಾಮಿ ಜಿಲ್ಲಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಮತ್ತೊಂದೆಡೆ, ದ್ವೀಪದಿಂದ ರಾತ್ರಿ ದೋಣಿ ಸೇವೆ ಇಲ್ಲದ ಕಾರಣ ರೋಗಿಯನ್ನು ಜೋರ್ಹತ್ ಅಥವಾ ಲಖಿಂಪುರಕ್ಕೆ ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತೇಜಸ್ವಿತಾಳನ್ನು ಆಸ್ಪತ್ರೆಯಲ್ಲಿ ಎರಡು ಗಂಟೆಗಳ ಕಾಲ ಯಾರೂ ಗಮನಿಸದ ಹಿನ್ನೆಲೆ ಬಾಲಕಿ ಕೊನೆಯುಸಿರೆಳೆದಳು ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆ, ಅಸ್ಸಾಂ ಆರೋಗ್ಯ ಇಲಾಖೆಯು ಶ್ರೀ ಪಿತಾಂಬರ ದೇವ ಗೋಸ್ವಾಮಿ ಜಿಲ್ಲಾ ಸಿವಿಲ್ ಆಸ್ಪತ್ರೆಯ ಮೇಲ್ವಿಚಾರಕಿ ಡಾ. ಅಮೂಲ್ಯ ಗೋಸ್ವಾಮಿ ಅವರನ್ನು ಅಮಾನತುಗೊಳಿಸಿದೆ. ಜೊತೆಗೆ ಈ ಬಗ್ಗೆ ತನಿಖೆಗೆ ಆದೇಶಿಸಿದೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!