spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಿನ ಭವಿಷ್ಯ| ಈ ರಾಶಿಯವರು ಅಂದುಕೊಂಡಂತೆ ಎಲ್ಲಾ ನಡೆಯುತ್ತೆ..

- Advertisement -Nitte

ದಿನ ಭವಿಷ್ಯ: 05.08.2021

ಮೇಷ: ಇದ್ದುದರಲ್ಲೆ ಸಂತೋಷ ಪಡುವ ದಿನವಿದು. ಇರುವುದರಲ್ಲೇ ತೃಪ್ತಿ. ಪ್ರೀತಿಯ ವಿಷಯವು ನಿಮ್ಮ ಮನಸ್ಸನ್ನು ಆವರಿಸುತ್ತದೆ. ಆಪ್ತರ ಜತೆಗೆ ಕಾಲಕ್ಷೇಪ.

ವೃಷಭ: ವೃತ್ತಿ ಕ್ಷೇತ್ರದಲ್ಲಿ ನಿಮಗೆ ಪೂರಕ ವಾದ ದಿನ. ಎಲ್ಲವೂ ಸಲೀಸು. ಸಂಜೆ ವೇಳೆಗೆ ನಿಮ್ಮ ಮನಸ್ಸು ಕೆಡಿಸುವ ಪ್ರಸಂಗ ಸಂಭವಿಸಬಹುದು. ಆರ್ಥಿಕ ಒತ್ತಡ.

ಮಿಥುನ: ಉತ್ಸಾಹದ ದಿನ. ನಿಮ್ಮ ಗುರಿಯ ಕುರಿತು ಸ್ಪಷ್ಟತೆಯಿರಲಿ. ಬೇರೆ ಕಡೆಗೆ ಮನಸ್ಸು ವಾಲದಂತೆ ನೋಡಿಕೊಳ್ಳಿ. ಕೌಟುಂಬಿಕ ಸಹಕಾರ.

ಕಟಕ: ನಿಮ್ಮ ಹಣಕಾಸು ವ್ಯವಹಾರದ ಕುರಿತಂತೆ ಹೆಚ್ಚು ಗಮನ ಹರಿಸಬೇಕಾದ ಅಗತ್ಯ. ಪ್ರಮುಖ ಖರ್ಚುಗಳಿಗೆ ಹಣ ಹೊಂದಿಸಬೇಕಾಗಿದೆ.

ಸಿಂಹ: ನಿಮ್ಮ ಕಾರ್ಯ ವ್ಯವಹಾರ ಕೆಲವರನ್ನು ಪ್ರೇರೇಪಿಸುವುದು. ನಿಮಗೆ ಪೂರಕವಾಗಿ ಸ್ಪಂದಿಸುವ ವ್ಯಕ್ತಿಗಳ ಜತೆ ಒಡನಾಟ. ಒಟ್ಟಿನಲ್ಲಿ ಕುಶಿಯ ದಿನ.

ಕನ್ಯಾ: ವೃತ್ತಿಯಲ್ಲಿ ಕೆಲವು ವಿಷಯಗಳು ನಿಮಗೆ ಪೂರಕವಾಗಿ ನಡೆಯುತ್ತವೆ. ಆದರೆ ಕೌಟುಂಬಿಕವಾಗಿ ನಿಮಗೆ ಅಸಮಾಧಾನ ಹೆಚ್ಚುವ ಬೆಳವಣಿಗೆ.

ತುಲಾ: ನಿಮಗೆ ಇಷ್ಟದ ವಿಷಯದಲ್ಲಿ ತೊಡಗಿಕೊಳ್ಳುವ ಅವಕಾಶ. ಇಂದು ಯಾವುದೇ ಕಾರ್ಯದಲ್ಲೂ ನಿಮಗೆ ಯಶಸ್ಸು ದೊರಕುವುದು.

ವೃಶ್ಚಿಕ: ಮಾನಸಿಕ ಒತ್ತಡ.ವೈಯಕ್ತಿಕ ಬದುಕಿನಲ್ಲಿ  ಕೆಲವು ಅನಪೇಕ್ಷಿತ ಬೆಳವಣಿಗೆ. ಆಪ್ತರು ನಿಮ್ಮನ್ನು ಕಡೆಗಣಿಸುತ್ತಿದ್ದಾರೆಂಬ ನೋವು.

ಧನು: ಭಾವನಾತ್ಮಕ ಏರುಪೇರು ಅನುಭವಿಸುವಿರಿ. ಆದರೆ ನಿಮ್ಮ ಬದ್ಧತೆಯನ್ನು ಕದಲಿಸಲು ಸಾಧ್ಯವಾಗದು. ಹಿನ್ನಡೆಗೆ ಅಂಜದಿರಿ, ಮುಂದೆ ಒಳಿತು ಕಾದಿದೆ.

ಮಕರ: ನೀರಸ ದಿನ. ಹೆಚ್ಚಿನ ಏರುಪೇರು ಸಂಭವಿಸದು. ಆದರೆ ಸದ್ಯದಲ್ಲೆ ಒಳ್ಳೆಯ ಬೆಳವಣಿಗೆಯೊಂದು ಸಂಭವಿಸುವುದು, ನಿರೀಕ್ಷಿಸಿ.

ಕುಂಭ: ಇತರರೊಂದಿಗೆ ನಿಮ್ಮ ಉತ್ತಮ ಸಂವಹನ ಕಲೆಯಿಂದಾಗಿ ವೃತ್ತಿಯಲ್ಲಿ  ಬೆಳವಣಿಗೆ ಸಾಸುವಿರಿ. ಅಡ್ಡಿಗಳು ಒದಗಿದರೂ ಅದನ್ನು ನಿಭಾಯಿಸುವಿರಿ.

ಮೀನ: ಉತ್ಸಾಹದ ದಿನ. ಎಲ್ಲವೂ ನೀವು ಅಂದುಕೊಂಡಂತೆ ನಡೆಯುವುದು. ನಿಮ್ಮ ವಿರೋಗಳು ಹಿನ್ನಡೆ ಸಾಸುವರು. ಆರ್ಥಿಕ ಪ್ರಗತಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss