ಇಸ್ಲಾಂ ತೀವ್ರವಾದದ ಕುರಿತಾಗಿ ಚರ್ಚ್‌ ಗಳಿಗೆ ಎಚ್ಚರಿಕೆಯ ಪಾಠ ಮಾಡಿದ ಕೇಂದ್ರಸಚಿವ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಸ್ಲಾಮಿಕ್ ಭಯೋತ್ಪಾದನೆ ವಿಶ್ವದಾದ್ಯಂತ ಕ್ರಿಶ್ಚಿಯನ್ನರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಕೇರಳದಲ್ಲಿ ಮಾತಾಂಧರಿಂದ ಅವ್ಯಾಹತವಾಗಿ ಸಾಗುತ್ತಿರುವ “ಲವ್‌ ಜಿಹಾದ್‌ʼ ಬಗ್ಗೆ ಹೋರಾಡುತ್ತಿರುವವರ ಧ್ವನಿಯನ್ನು ಎಡಪಕ್ಷಗಳು ಹತ್ತಿಕ್ಕುತ್ತಿವೆ ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ವಿ.ಮುರಳೀಧರನ್ ಕಿಡಿಕಾರಿದ್ದಾರೆ.
ಕೇರಳದ ಕಣ್ಣೂರಿನ ತಲಶ್ಶೇರಿ ಚರ್ಚ್‌ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮುರಳೀಧರನ್, ಇರಾಕ್, ಸಿರಿಯಾ ಮತ್ತು ಭಾರತದ ನೆರೆಯ ದೇಶ ಶ್ರೀಲಂಕಾದಲ್ಲಿ ಉಗ್ರರು ವಿದ್ವಾಂಸಕ ಕೃತ್ಯಗಳಿಂದ ಕ್ರಿಶ್ಚಿಯನ್ನರ ರಕ್ತ ಹರಿಸಿದ್ದಾರೆ. ಶ್ರೀಲಂಕಾದಲ್ಲಿ 2018 ರಲ್ಲಿ ಈಸ್ಟರ್ ಹಬ್ಬದ ದಿನದಂದೇ ಇಸ್ಲಾಮಿಕ್ ಉಗ್ರಗಾಮಿಗಳು ಕ್ರಿಶ್ಚಿಯನ್ನರನ್ನು ಕಗ್ಗೊಲೆ ಮಾಡಿದರು. ಆದರೆ ಈ ದಾಳಿಯನ್ನು ಕಟು ಪದಗಳಲ್ಲಿ ಖಂಡಿಸಬೇಕಿದ್ದ ಪೋಪ್ ಫ್ರಾನ್ಸಿಸ್ ಅವರು ʼಎಲ್ಲರನ್ನೂʼ ಪ್ರೀತಿಸುವಂತೆ ಉತ್ತೇಜಿಸಿದರು ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ಇಸ್ಲಾಮಿಕ್ ಭಯೋತ್ಪಾದನೆಯನ್ನು ತಡೆಗಟ್ಟುವುದು ಅಸಾಧ್ಯವೇನಲ್ಲ, ಆದರೆ ಈ ಕುರಿತು ಧರ್ಮಗುರುಗಳು ಜನರಲ್ಲಿ ಹೆಚ್ಚಿನ ಕಾಳಜಿ ಮೂಡಿಸಬೇಕು ಎಂದರು. ನರೇಂದ್ರ ಮೋದಿ ಸರ್ಕಾರವು ಚರ್ಚ್ಗಳ ಆತಂಕವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಕೇಂದ್ರ ಸರ್ಕಾರವು ಇಸ್ಲಾಮಿಕ್‌ ಭಯೋತ್ಪಾದನೆಯನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.
ಇದೇ ವೇಳೆ ಲವ್ ಜಿಹಾದ್‌ ವಿಚಾರವಾಗಿ ಮುರಳೀಧರನ್ ಕೇರಳದ ಎಡಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಷಪ್‌ಗಳು ʼಲವ್‌ ಜಿಹಾದ್ʼ ಪದವನ್ನು ಬಳಸಿದರೆ ಅವರ ವಿರುದ್ಧವೇ ಪ್ರಕರಣಗಳು ದಾಖಲಾಗುವುದು ಕಳವಳಕಾರಿ ಸಂಗತಿಯಾಗಿದೆ. ಕ್ರಿಶ್ಚಿಯನ್ ಮಹಿಳೆಯರನ್ನು ಮತಾಂತರಿಸುವ ಯೋಜಿತ ಪ್ರಯತ್ನ ನಡೆಯುತ್ತಿರುವ ಕುರಿತಾಗಿ ಚರ್ಚ್ಗಳ ಮುಖ್ಯಸ್ಥರಲ್ಲದೇ ಮತ್ಯಾರು ಧ್ವನಿಯೆತ್ತಲು ಸಾಧ್ಯ? ಆದರೆ ಅವರ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತದೆ. ಮತಾಂಧ ಜಿಹಾದಿಗಳು ಕ್ರೈಸ್ತ ಮಹಿಳೆಯರನ್ನು ಲವ್ ಜಿಹಾದ್‌ನಲ್ಲಿ ಸಿಲುಕಿಸುತ್ತಿರುವ ಕೃತ್ಯಗಳಲ್ಲಿ ತೊಡಗಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಸಚಿವರು ಕಿಡಿಕಾರಿಸರು.
“ಧಾರ್ಮಿಕ ಭಯೋತ್ಪಾದನೆ” ವಿರುದ್ಧ ದೊಡ್ಡಮಟ್ಟದ ಅಭಿಯಾನಕ್ಕೆ ಕೇರಳ ರಾಜ್ಯ ರಾಜ್ಯ ಬಿಜೆಪಿ ಮುಂದಾಗಿದೆ. ಈ ನಡುವೆ ಚರ್ಚ್ ಕಾರ್ಯಕ್ರಮವೊಂದರರಲ್ಲಿಯೇ ನಿಂತು ಕೇಂದ್ರ ಸಚಿವರು ಮುಸ್ಲಿಂ ಭಯೋತ್ಪಾದನೆಯ ವಿರುದ್ಧ ಧ್ವನಿಯೆತ್ತಿರುವುದು ಮಹತ್ವಪಡೆದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಏಪ್ರಿಲ್ 29 ರಂದು ಪಕ್ಷದ ರಾಜ್ಯ ನಾಯಕತ್ವ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಧಾರ್ಮಿಕ ಭಯೋತ್ಪಾದನೆ ವಿರುದ್ಧದ ಹೋರಾಟದ ಬಗ್ಗೆ ಕ್ರಿಯಾ ಯೋಜನೆ ರೂಪಿಸಲಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!