ಅಫ್ಘಾನಿಸ್ತಾನದಲ್ಲಿ ಸರಣಿ ಬಾಂಬ್‌ ಸ್ಫೋಟ; 14 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಮಜರ್-ಇ-ಷರೀಫ್‌ನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ. ಬುಧವಾರ ನಾಲ್ಕು ಪ್ರತ್ಯೇಕ ಕಡೆ ಉಂಟಾದ ಸ್ಫೋಟಗಳಲ್ಲಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದು, 32 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಾಲಿಬಾನ್ ಆಡಳಿತವನ್ನು ವಿರೋಧಿಸುತ್ತಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪು ಸರಣಿ ಬಾಂಬ್ ದಾಳಿಯಲ್ಲಿ ಭಾಗಿಯಾಗಿರಬಹುದು ಎಂದು ಅಲ್ಲಿನ ಅಧಿಕಾರಿಗಳು ಶಂಕಿಸಿದ್ದಾರೆ. ಬುಧವಾರ (ಮೇ 24) ಸಂಜೆಯ ಪ್ರಾರ್ಥನೆಯ ವೇಳೆ ಪೊಲೀಸ್ ಜಿಲ್ಲೆ (ಪಿಡಿ) 4 ರ ಮಸೀದಿಯಲ್ಲಿ ಸ್ಫೋಟ ಸಂಭವಿಸಿ ಐದು ಜನ ಸಾವನ್ನಪ್ಪಿದ್ದು, 17 ಮಂದಿ ಗಾಯಗೊಂಡಿದ್ದಾರೆ.

ಹಜರತ್-ಎ-ಜಕ್ರಿಯಾದ ಮಸೀದಿಯೊಂದರ ಮುಂದೆ ಬಾಂಬ್ ದಾಳಿ ನಡೆದಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಜರ್-ಎ-ಷರೀಫ್‌ನಲ್ಲಿ ಸತತ ಮೂರು ಬಾಂಬ್ ಸ್ಫೋಟ ಸಂಭವಿಸಿವೆ. ಮೂರು ವ್ಯಾನ್ ಮತ್ತು ಬಸ್‌ಗಳು ಡಿಕ್ಕಿ ಹೊಡೆದ ಒಂದು ಗಂಟೆಯ ನಂತರ ಈ ಸ್ಫೋಟ ಸಂಭವಿಸಿದೆ ಎನ್ನಾಗಿದೆ.

ಈ ಘಟನೆಯಲ್ಲಿ ಒಂಭತ್ತು ಜನರು ಮರಣ ಹೊಂದಿದ್ದಾರೆ. ಹಾಗೂ 15 ಮಂದಿ ಆಸ್ಪತ್ರೆ ಪಾಲಾಗಿದ್ದಾರೆ ಎಂದು ಪೊಲೀಸ್ ಇಲಾಖೆಯ ವಕ್ತಾರ ಪ್ರಾಂತೀಯ ಮೊಹಮ್ಮದ್ ಆಸಿಫ್ ವಜಿರಿ ತಿಳಿಸಿದ್ದಾರೆ. ಸದಾ ಜನಸಂದಣಿ ಇರುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಸರಣಿ ಬಾಂಬ್ ದಾಳಿ ನಡೆಸುತ್ತಿದ್ದಾರೆ. ಆದರೆ ಈವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!