ಪ್ರೀತಿ ಅಂದ್ರೆ ಹಾಗೇನೆ! 93ನೇ ವಯಸ್ಸಿನಲ್ಲಿ ಗೆಳತಿಯನ್ನು ವರಿಸಿದ ಗಗನಯಾತ್ರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಐದು ದಶಕಗಳ ಹಿಂದೆ ಚಂದ್ರನ ಮೇಲೆ ಕಾಲಿಟ್ಟ ಎರಡನೇ ಗಗನಯಾತ್ರಿಯಾಗಿ ಇತಿಹಾಸ ನಿರ್ಮಿಸಿದ್ದ ಬಝ್ ಆಲ್ಡ್ರಿನ್ ಎಲ್ಲರಿಗೂ ಚಿರಪರಿಚಿತ. ಚಂದ್ರನಲ್ಲಿಗೆ ಹೋಗಿ ಇತಿಹಾಸ ಸೃಷ್ಟಿಸಿದ ಅವರು ತಮ್ಮ 93ನೇ ಹುಟ್ಟುಹಬ್ಬದಂದು ತಾವು ಪ್ರೀತಿಸಿದ ಗೆಳತಿಯನ್ನು ಮದುವೆಯಾಗಿ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ಈ ವಿಷಯವನ್ನು ತನ್ನ ಟ್ವಿಟರ್ ಖಾತೆಯ ಮೂಲಕ ಬಹಿರಂಗಪಡಿಸಿದರು. ಆಲ್ಡ್ರಿನ್ ಅವರು ಡಾ. ಅಂಕಾ ಫರ್ ಅವರನ್ನು ಬಹಳ ಸಮಯದಿಂದ ಪ್ರೀತಿಸುತ್ತಿದ್ದರು ಮತ್ತು ಇದೀಗ ಪ್ರೀತಿಯನ್ನು ಮದುವೆಗೆ ತಿರುಗಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ಡಾ.ಅಂಕಾಫರ್ ಮತ್ತು ಆಲ್ಡ್ರಿನ್ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಅಂಕಾಳ ವಯಸ್ಸು ಸುಮಾರು 55 ವರ್ಷ. ಆಲ್ಡ್ರಿನ್ ತನಗಿಂತ ಸುಮಾರು 35 ವರ್ಷ ಕಿರಿಯ ಮಹಿಳೆಯನ್ನು ಮದುವೆಯಾಗಿದ್ದು, ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಇವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನನ್ನ 93 ನೇ ಹುಟ್ಟುಹಬ್ಬದಂದು “ವಾಯುಯಾನದ ಜೀವಂತ ದಂತಕಥೆ ಎಂದು ಗೌರವಿಸುವ ದಿನದಂದು ನಾನು ನನ್ನ ದೀರ್ಘಕಾಲದ ಗೆಳತಿ ಡಾ. ಅಂಕಾಫರ್ ಅವರನ್ನು ವಿವಾಹವಾಗಿದ್ದೇನೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ” ಎಂದು ಆಲ್ಡ್ರಿನ್ ಹೇಳಿದರು. ಲಾಸ್ ಏಂಜಲೀಸ್‌ನಲ್ಲಿ ನಡೆದ ಸಮಾರಂಭದಲ್ಲಿ ಇಬ್ಬರೂ ಪವಿತ್ರ ಬಂಧಗಳಲ್ಲಿ ಒಂದಾಗಿದ್ದರು.

ಆಲ್ಡ್ರಿನ್‌ ಇದಕ್ಕೂ ಮೊದಲು ಅವರು ಮೂರು ಮದುವೆಯಾಗಿ ವಿಚ್ಛೇದನ ಪಡೆದರು. US ಬಾಹ್ಯಾಕಾಶ ಸಂಸ್ಥೆ ಕಳುಹಿಸಿದ ಅಪೊಲೊ 11 ಬಾಹ್ಯಾಕಾಶ ನೌಕೆಯಲ್ಲಿ ಐದು ದಶಕಗಳ ಹಿಂದೆ ಚಂದ್ರನ ಮೇಲೆ ಕಾಲಿಟ್ಟ ಎರಡನೇ ವ್ಯಕ್ತಿ ಆಲ್ಡ್ರಿನ್. ಆ ಸಮಯದಲ್ಲಿ ಚಂದ್ರನ ಮೇಲೆ ಕಾಲಿಟ್ಟ ಮೂವರು ಗಗನಯಾತ್ರಿಗಳಲ್ಲಿ ಇಂದಿಗೂ ಜೀವಂತವಾಗಿರುವ ಏಕೈಕ ವ್ಯಕ್ತಿ ಆಲ್ಡ್ರಿನ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!