spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಒಲಿಂಪಿಕ್ಸ್​​ನಲ್ಲಿ ಪದಕ ಗೆದ್ದ ಹಾಕಿ ತಂಡಕ್ಕೆ ಪ್ರಧಾನಿ ಮೋದಿಯಿಂದ ಸರ್ಪ್ರೈಸ್ ಕಾಲ್!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್

ಟೊಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತದ ಕ್ರೀಡಾಪಟುಗಳ ಪದಕದ ಬೇಟೆ ಮುಂದುವರೆದಿದ್ದು, ಹಾಕಿಯಲ್ಲಿ 41 ವರ್ಷಗಳ ಬಳಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ಜರ್ಮನಿ ತಂಡದ ವಿರುದ್ಧ 5-4 ಅಂತರದಲ್ಲಿ ಗೆಲ್ಲುವ ಮೂಲಕ ಭಾರತದ ತಂಡ ಕಂಚಿನ ಪದಕಕ್ಕೆ ಮುತ್ತಿಟ್ಟಿದೆ. ಕಂಚಿನ ಪದಕ ಗೆಲ್ಲುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಂಡದ ನಾಯಕ ಮನಪ್ರೀತ್​ ಸಿಂಗ್​ ಹಾಗೂ ಕೋಚ್​ ಗ್ರ್ಯಾಮ್​​ ರಿಡ್​ಗೆ ಫೋನ್​​ ಕರೆ ಮಾಡಿ ಶುಭಾಶಯಗಳ ತಿಳಿಸಿದ್ದಾರೆ. ಸರ್ಪ್ರೈಸ್​​ ಕಾಲ್​​​ ತಂಡದ ಗೆಲುವಿನ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಮನ್​​ಪ್ರೀತ್​ ನಿಮಗೆ ಹಾಗೂ ಇಡೀ ತಂಡಕ್ಕೆ ಶುಭಾಶಯಗಳು. ನೀವು ಅತ್ತುತ್ತಮ ಸಾಧನೆ ಮಾಡಿದ್ದೀರಿ. ಇಡೀ ದೇಶ ನಿಮ್ಮ ಗೆಲುವಿನಿಂದ ಖುಷಿಯಲ್ಲಿ ಕುಣಿಯುತ್ತಿದೆ. ಹೃದಯ ತುಂಬಿ ಬಂದಿದೆ. ನನ್ನ ಶುಭಾಶಯಗಳನ್ನು ತಂಡದ ಪ್ರತಿಯೊಬ್ಬರಿಗೂ ತಿಳಿಸಿ. ಆಗಸ್ಟ್​​ 15ರಂದು ಭೇಟಿಯಾಗಲು ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ ಎಂದು ಮೋದಿ ಅವರು ಕರೆ ಮಾಡಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಹಾಕಿ ತಂಡ ಸೆಮಿಫೈನಲ್​​ನಲ್ಲಿ ಸೋಲು ಕಂಡ ಬಳಿಕವೂ ಕರೆ ಮಾಡಿ ಮಾತನಾಡಿದ್ದರು. ಆ ವೇಳೆ ಕೋಚ್​ ಗ್ರ್ಯಾಮ್​​ ರಿಡ್ ಜೊತೆ ಮಾತನಾಡಿದ್ದ ಪ್ರಧಾನಿ, ನಿಮ್ಮ ಶ್ರಮ ತಂಡದ ಆಟದಲ್ಲಿ ಕಾಣುತ್ತಿದೆ ಎಂದು ಆಸ್ಟ್ರೇಲಿಯಾ ಮೂಲದ ತರಬೇತುದಾರನ ಕೊಡುಗೆಯನ್ನು ಮೋದಿ ಪ್ರಶಂಸಿಸಿ ಅಭಿನಂದನೆಗಳನ್ನು ತಿಳಿಸಿದ್ದರು. ರಿಡ್​​ ಅವರು ಸಹ ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದರು. ಸೋಲಿನ ಬಳಿಕ ನಿಮ್ಮ ಪ್ರೋತ್ಸಾಹದಾಯಕ ಮಾತುಗಳು ನಮಗೆ ದೊಡ್ಡ ಬಲ ತಂದು ಕೊಟ್ಟಿದೆ ಎಂದು ಹೇಳಿದ್ದರು.
ಭಾರತದ ಹಾಕಿ ತಂಡ ಕಂಚಿನ ಪದಕ ಗೆಲ್ಲುತ್ತಲೇ ಟ್ವೀಟ್​ ಮಾಡಿದ್ದ ಪ್ರಧಾನಿ ಮೋದಿ, ಭಾರತದ ಪಾಲಿಗೆ ಇಂದು ಐಸಿಹಾಸಿಕ ದಿನ ಎಂದು ಬಣ್ಣಿಸಿದ್ದರು. ಇಡೀ ದೇಶಕ್ಕೆ ಹೆಮ್ಮೆ ತಂದ ತಂಡದ ಪ್ರತಿಯೊಬ್ಬರಿಗೆ ಅಭಿನಂದನೆಗಳು ಎಂದಿದ್ದರು.
ಆ.15ರಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಹಾಕಿ ತಂಡದ ಆಟಗಾರರನ್ನು ಪಧಾನಿ ಮೋದಿ ಆಹ್ವಾನಿಸಿದ್ದಾರೆ. ಕೆಂಪುಕೋಟೆ ಧ್ವಜಾರೋಹಣದಲ್ಲಿ ಹಾಕಿ ತಂಡ ಭಾಗಿಯಾಗಲಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss