‘ನೀಚ ಜಾತಿ’ಯವಳೆಂದು ಜರೆದು ಜೈಲಿನಲ್ಲಿ ನೀರು- ಶೌಚಾಲಯ ವ್ಯವಸ್ಥೆ ಕೊಡಲಿಲ್ಲ- ಸಂಸದೆ ನವನೀತ್ ರಾಣಾ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನನ್ನನ್ನು ನೀಚ ಜಾತಿಯವಳೆಂದು ಜರೆದು ಜೈಲಿನಲ್ಲಿ ನೀರು- ಶೌಚಾಲಯ ವ್ಯವಸ್ಥೆ ಕೊಡಲಿಲ್ಲ ಎಂದು ಸಂಸದೆ ನವನೀತ್ ರಾಣಾ ಆರೋಪ ಮಾಡಿದ್ದಾರೆ. ಹನುಮಾನ್‌ ಚಾಲೀಸಾ ಪ್ರಕರಣ ಎದುರಿಸುತ್ತಿರುವ ಸಂಸದೆ ನವನೀತ್‌ ಕೌರ್‌ ರಾಣಾ ಪೊಲೀಸ್‌ ಠಾಣೆಯಲ್ಲಿ ತನ್ನ ಬಗೆಗೆ ಪೊಲೀಸರು ತೋರಿರುವ ನಡೆ ಕುರಿತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ನಾನು ಪರಿಶಿಷ್ಟ ಜಾತಿ ಎಂಬ ಕಾರಣಕ್ಕಾಗಿ ಕುಡಿಯುವ ನೀರು ಸೇರಿದಂತೆ ಮಾನವನ ಮೂಲಭೂತ ಹಕ್ಕುಗಳನ್ನು ನೀಡಲು ನಿರಾಕರಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾತ್ರಿ ವೇಳೆ ಶೌಚಾಲಯ, ಸ್ನಾನದ ಗೃಹ ಬಳಸಲು ಅನುಮತಿ ಕೇಳಿದರೆ, ಪೊಲೀಸ್ ಸಿಬ್ಬಂದಿ ನನ್ನ ಬೇಡಿಕೆಗಳಿಗೆ ಗಮನ ಕೊಡಲಿಲ್ಲ. ನನ್ನನ್ನು ಅತ್ಯಂತ ಕೀಳಾಗಿ ನಿಂದಿಸಿದ್ದಾರೆ. ನೀಚ ಜಾತಿಯವರಿಗೆ ನಮ್ಮ ಸ್ನಾನಗೃಹಗಳನ್ನು ಬಳಸಲು ಬಿಡುವುದಿಲ್ಲ ಎಂದು ತಾಕೀತು ಮಾಡಿದರು ಎಂಬ ಗಂಭೀರ ಆರೋಪಗಳನ್ನು ಮಾಡಿದರು.

ಶಿವಸೇನೆಯಲ್ಲಿ ಹಿಂದುತ್ವದ ಜ್ವಾಲೆಯನ್ನು ಪುನರುಜ್ಜೀವನಗೊಳಿಸುವ ಪ್ರಾಮಾಣಿಕ ಆಶಯದೊಂದಿಗೆ ಮುಖ್ಯಮಂತ್ರಿಗಳ ನಿವಾಸದ ಹೊರಗೆ “ಹನುಮಾನ್ ಚಾಲೀಸಾ” ಪಠಣ ಮಾಡುತ್ತೇನೆ ಎಂದು ಘೋಷಿಸಿದ್ದೆ. ಇದು ಯಾವುದೇ ಧಾರ್ಮಿಕ ಉದ್ವಿಗ್ನತೆಯನ್ನು ಪ್ರಚೋದಿಸುವ ಉದ್ದೇಶದಿಂದ ಕೂಡಿಲ್ಲ ಎಂದಿದ್ದಾರೆ.

ವಾಸ್ತವವಾಗಿ, “ಹನುಮಾನ್ ಚಾಲೀಸಾ” ಪಠಣ ಮಾಡಲು ನನ್ನೊಂದಿಗೆ ಮುಖ್ಯಮಂತ್ರಿಯವರು ಬರಬಹುದು ಎಂದು ಆಹ್ವಾನಿಸಿದ್ದೆ ಹೊರತು ನನ್ನ ಹೇಳಿಕೆ ಮುಖ್ಯಮಂತ್ರಿ ವಿರುದ್ಧ ಅಲ್ಲ ಎಂಬುದನ್ನು ಪುನರುಚ್ಚರಿಸಿದ್ದಾರೆ.

ನನ್ನ ಈ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಮುಂಬೈನಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಹಾನಿಕಾರಕವೆಂದು ಸಾಬೀತುಪಡಿಸಬಹುದು ಎಂಬ ಅಂಶವನ್ನು ಗಮನಿಸಿ, ಈ ಹೇಳಿಕೆಯನ್ನು ವಾಪಸ್‌ ಪಡೆದಿದ್ದೇನೆ. ಜೊತೆಗೆ ಸಿಎಂ ಉದ್ಧವ್‌ ಠಾಕ್ರೆ ನಿವಾಸದ ಬಳಿ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!