ಕೋತಿಯಿಂದ ದಾಳಿ: ಟೆರೇಸ್‌ ನಿಂದ ಬಿದ್ದು ವ್ಯಕ್ತಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಂಗಳವಾರ ಬೆಳಗ್ಗೆ ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ 40 ವರ್ಷದ ವ್ಯಕ್ತಿಯೊಬ್ಬ ಮಂಗಗಳ ಹಿಂಡಿನಿಂದ ದಾಳಿಗೆ ಒಳಗಾಗಿ ಮನೆಯ ಮೇಲ್ಛಾವಣಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ.

ನೈಬಸ್ತಿಯ ನಿವಾಸಿ ಆಶಿಶ್ ಜೈನ್ ಎಂದು ಗುರುತಿಸಲಾದ ಈ ವ್ಯಕ್ತಿ ತನ್ನ ಮನೆಯ ಎರಡನೇ ಮಹಡಿಗೆ ಕೆಲಸದ ನಿಮಿತ್ತ ಹೋಗಿದ್ದರು ಆದರೆ ಅಲ್ಲಿ ಕುಳಿತಿದ್ದ ಕೋತಿಗಳ ಗುಂಪೊಂದು ಅವರ ಮೇಲೆ ದಾಳಿ ಮಾಡಿದೆ.

ಅವನು ತನ್ನನ್ನು ರಕ್ಷಿಸಿಕೊಳ್ಳಲು ಓಡಿದಾಗ, ಎಡವಿ (ಕಾಲು ಜಾರಿ) ಎರಡನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಆತನ ತಲೆಗೆ ಗಂಭೀರ ಗಾಯಗಳಾಗಿವೆ. ಆಶಿಶ್ ನನ್ನು ತಕ್ಷಣ ವೈದ್ಯರ ಬಳಿಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಹಲವು ಬಾರಿ ಮಹಾನಗರ ಪಾಲಿಕೆಗೆ ಮಾಹಿತಿ ನೀಡಿದರೂ ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸುತ್ತಿರುವ ಮಂಗಗಳನ್ನು ಹಿಡಿಯಲು ಯಾವುದೇ ಯೋಜನೆ ರೂಪಿಸುತ್ತಿಲ್ಲ ಎಂದು ಈ ಭಾಗದ ಜನರು ದೂರಿದ್ದಾರೆ.

ಆದರ್ಶ್ ನಗರ, ಹನುಮಾನ್ ಗಂಜ್, ನಾಯ್ ಬಸ್ತಿ, ಮಹಾವೀರ್ ನಗರ, ಸುಹಾಗ್ ನಗರ, ಕೋಟ್ಲಾ ಮೊಹಲ್ಲಾ, ಗಾಧಿಯಾ, ಚಂದ್‌ವಾರ್ ಗೇಟ್, ಜಲೇಸರ್ ರಸ್ತೆ, ಕೋಟ್ಲಾ ರಸ್ತೆ, ವಿಭಾವ್ ನಗರ ಸೇರಿದಂತೆ ಸ್ಥಳಗಳಲ್ಲಿ ಮಂಗಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಜನರ ಮೇಲೆ ಆಗಾಗೆ ದಾಳಿ ನಡೆಸುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!