Thursday, August 11, 2022

Latest Posts

ಮಾರಕಾಯುಧದಿಂದ ದಾಳಿ: ಮೂವರು ಮಹಿಳೆಯರಿಗೆ ಗಂಭೀರ ಗಾಯ

ಹೊಸದಿಗಂತ ವರದಿ, ಮಂಗಳೂರು:

ನಗರದ ಕೊಡಿಯಾಲ್ ವ್ಯಾಪ್ತಿಯ ಕರಂಗಲ್‌ಪಾಡಿ ಜೈಲ್ ರಸ್ತೆಯಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಒಳಗೆ ನುಗ್ಗಿದ ದುಷ್ಕರ್ಮಿಯೋರ್ವ ಮಾರಕಾಯುಧದಿಂದ ಮೂರು ಮಂದಿ ಮಹಿಳೆಯರ ಮೇಲೆ ದಾಳಿ ನಡೆಸಿದ ಘಟನೆ ಸೋಮವಾರ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಯಟ್ ಸಂಸ್ಥೆಯ ರೀನಾ, ಗುಣವತಿ ಮತ್ತು ನಿರ್ಮಲ ಹಲ್ಲೆಗೊಳಗಾದವರು.
ಮಾರಕ ಆಯುಧದೊಂದಿಗೆ ಏಕಾಏಕಿ ನುಗ್ಗಿದ ದುಷ್ಕರ್ಮಿ ಮಹಿಳೆಯರ ತಲೆ , ಕೈ ಮತ್ತಿತರ ಭಾಗಗಳಿಗೆ ದಾಳಿ ನಡೆಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು, ಜಿ.ಪಂ. ಸಿಇಒ ಡಾ.ಕುಮಾರ್, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss