ಗಾಂಜಾ-ಮಾದಕ ವಸ್ತು ಮಾರಾಟ ಯತ್ನ: ಐವರ ಬಂಧನ

ಹೊಸದಿಗಂತ ವರದಿ ಮಡಿಕೇರಿ:

ಗಾಂಜಾ ಮತ್ತು ಎಂಡಿಎಂಎ ಮಾದಕ ಪದಾರ್ಥವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ವೀರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. ಕುಟ್ಟಂಡ ಬೋಪಣ್ಣ (42), ಜಬೀವುಲ್ಲಾ ಖಾನ್ (41),  ಕೆ.ಎಸ್.ಫರೀದ್ (22), ಎಂ.ಕೆ.ಹೈದರ್ ಆಲಿ ಅಲಿಯಾಸ್ ಆಲಿಶಾಜ್ (24) ಹಾಗೂ ಕೆ.ವಿ.ಸುನಿಲ್ (26) ಬಂಧಿತ ಆರೋಪಿಗಳು. ಬಂಧಿತರಿಂದ 760 ಗ್ರಾಂ ಗಾಂಜಾ ಮತ್ತು 15.5 ಗ್ರಾಂ ಮಾದಕ ಪದಾರ್ಥ, 3,700 ರೂ. ನಗದು, ಅಕ್ರಮಕ್ಕೆ ಬಳಸಿದ್ದ 5 ಮೊಬೈಲ್ ಫೋನ್, ಎರಡು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಮಾದಕ ವಸ್ತುವಿನ ಒಟ್ಟು ಮೌಲ್ಯ ರೂ.46,500, ಗಾಂಜಾ ಮೌಲ್ಯ 20 ಸಾವಿರ ರೂ. ಮತ್ತು ಬೈಕ್‌ಗಳ ಒಟ್ಟು ಮೌಲ್ಯ 1ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ವೀರಾಜಪೇಟೆಯ ಸುಂಕದಕಟ್ಟೆ ಬಳಿ ಆರೋಪಿಗಳು ಮಾದಕ ವಸ್ತುಗಳ ಮಾರಾಟಕ್ಕೆ ತಂತ್ರ ರೂಪಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!