ಪ್ರಯಾಣಿಕರೇ ಗಮನಿಸಿ.. ಬಾಗಲಕೋಟೆ-ವಿಜಯಪುರ ನಡುವೆ ರೈಲು ಸಂಚಾರ 4 ದಿನ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಹುಬ್ಬಳ್ಳಿ, ಮಂಗಳೂರು ಮತ್ತು ಬೆಂಗಳೂರಿನಿಂದ ವಿಜಯಪುರಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ವಲಯ ಶಾಕ್​ ನೀಡಿದೆ. ಈ ಊರುಗಳಿಂದ ಹೊರಡುವ ರೈಲುಗಳು ಬಾಗಲಕೋಟೆಯಲ್ಲಿ  ಕೊನೆಯಾಗಲಿವೆ. ಬಾಗಲಕೋಟೆ ಮತ್ತು ವಿಜಯಪುರದ ನಡುವೆ ರೈಲು ಸಂಚಾರ ನಾಲ್ಕು ದಿನಗಳ ಕಾಲ ರದ್ದಾಗಲಿದೆ. ಯಾವ್ಯಾವ ರೈಲುಗಳ ಸಂಚಾರ ರದ್ದಾಗಲಿದೆ.

ಸೆಪ್ಟೆಂಬರ್​ 29 ರಿಂದ ಹುಬ್ಬಳ್ಳಿ ವಿಭಾಗದ ಕೂಡಗಿ ರೈಲ್ವೆ ಯಾರ್ಡ್​ನಲ್ಲಿ ಇಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆಲ ರೈಲುಗಳ ಸಂಚಾರ ಬಾಗಲಕೋಟೆ-ವಿಜಯಪುರ ನಡುವೆ ರದ್ದಾಗಲಿದೆ. ಕೆಲವು ರೈಲುಗಳ ಸಂಚಾರವನ್ನು ನಿಯಂತ್ರಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!