ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಪಾಂಡವಪುರ:
ಲಾಕ್ಡೌನ್ಜಾರಿ ಹಿನ್ನೆಲೆ ಪಾಂಡವಪುರ ಪಟ್ಟಣದಲ್ಲಿಬೇಕಾಬಿಟ್ಟಿ ಸಂಚರಿಸುತ್ತಿದ್ದ 25ಕ್ಕೂ ಹೆಚ್ಚು ಬೈಕ್ಗಳನ್ನು ಸರ್ಕಲ್ಇನ್ಸ್ಪೆಕ್ಟರ್ಕೆ.ಪ್ರಭಾಕರ್ ನೇತೃತ್ವದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪಾಂಡವಪುರ ಪಟ್ಟಣದಐದು ದೀಪ ವೃತ್ತ, ಡಾ.ರಾಜ್ಕುಮಾರ್ ವೃತ್ತದಆವರಣದಲ್ಲಿ ಹಾಗೂ ಹೆದ್ದಾರಿಯಲ್ಲಿಅನೇಕರು ಬೈಕ್ ಮೂಲಕ ಇಲ್ಲಸಲ್ಲದ ಸಬೂಬು ಹೇಳಿಕೊಂಡು ಸಂಚರಿಸುತ್ತಿದ್ದ ಬೈಕ್ಗಳನ್ನು ಹಿಡಿದು ವಶಕ್ಕೆ ತೆಗೆದುಕೊಂಡಿದ್ದಾರೆ.
ಲಾಕ್ಡೌನ್ ದಿನಾಂಕ ಮುಗಿಯುವತನಕವಶ ಪಡೆದುಕೊಂಡಿರುವ ಬೈಕ್ಗಳನ್ನು ಪೊಲೀಸ್ಠಾಣೆಯಲ್ಲಿರುತ್ತದೆ. ನಂತರದ ದಿನಗಳಲ್ಲಿ ದಂಡ ಪಾವತಿಸಿ ಬೈಕ್ಗಳನ್ನು ಬಿಡುಗಡೆ ಮಾಡಿಕೊಳ್ಳಬಹುದುಎಂದು ಸರ್ಕಲ್ಇನ್ಸ್ಪೆಕ್ಟರ್ಕೆ.ಪ್ರಭಾಕರ್ ಬೈಕ್ ಮಾಲೀಕರಿಗೆ ತಿಳಿಸಿ ಎಚ್ಚರಿಸಿದ್ದಾರೆ.
ಪಾಂಡವಪುರ ಪಟ್ಟಣದ ಪ್ರಮುಖ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಎಲ್ಲೆಡೆ ಬ್ಯಾರಿಕೇಡ್ ಹಾಗೂ ಬೊಂಬುಗಳಿಂದ ರಸ್ತೆಗೆಅಡ್ಡಲಾಗಿಕಟ್ಟಲಾಗಿದೆ. ಲಾಕ್ಡೌನ್ ಸಮಯದಲ್ಲಿಯಾರಾದರೂಅನಾವಶ್ಯಕವಾಗಿತಿರುಗಾಡಿದರೆ ಬೈಕ್ ವಶಕ್ಕೆ ತೆಗೆದುಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ.