Thursday, July 7, 2022

Latest Posts

ಕಲಬುರಗಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣವೇಷಧಾರಿಗಳ ಆಕರ್ಷಕ ಪಥಸಂಚಲನ

ಹೊಸದಿಗಂತ ವರದಿ,ಕಲಬುರಗಿ:

ರಾಷ್ಟ್ರೀಯ ಸ್ವಯಂಸೇವಕ ಸಂಘವು 96 ವರ್ಷಗಳಿಂದ ತನ್ನ ಧ್ಯೇಯ ವಾಕ್ಯದೊಂದಿಗೆ ಮುನ್ನುಗ್ಗುತ್ತಾ ಬಂದಿದ್ದು, ಹಿಂದು ಧರ್ಮದ ಜಾಗೃತಿ, ಸಂಘಟನೆಯನ್ನು ಮೂಲವಾಗಿಸಿಕೊಂಡು ಬರುತ್ತಿದೆ,ಹೀಗಾಗಿ ಇದರ ಗುರಿಯೂ ನಿರ್ಧಾರಿತವಾಗಿದೆ ಹಾಗೂ ಹಾದಿಯೂ ನಿಶ್ಚಿತವಾಗಿದೆ ಎಂದು ಹಿಂದು ಜಾಗರಣ ವೇದಿಕೆ ದಕ್ಷಿಣ ಕ್ಷೇತ್ರದ, ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ ಜಗದೀಶ ಕಾರಂತ ತಿಳಿಸಿದರು.
ಅವರು ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಗಣವೇಶಧಾರಿಗಳ ಪಥಸಂಚಲನದ ನಂತರದ ಸಾರ್ವಜನಿಕ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಾವಿರ ವರ್ಷಗಳ ದಾಸ್ಯದ ಪರಿಣಾಮ ಎಲ್ಲರ ಮನಸ್ಸಿನಲ್ಲಿ ಹಿಂದು ಎಂದು ಹೇಳಿಕೊಳ್ಳುವುದಕ್ಕೆ ಮುಜುಗರ ಇತ್ತು, ಆದರೆ ಇಂದು ನಾನೊಬ್ಬ ಹಿಂದು ಎಂದು ಪ್ರತಿಯೊಬ್ಬರು ಘರ್ಜಿಸಿ ಹೇಳಿಕೊಳ್ಳುತ್ತಿದ್ದಾರೆ ಎಂದರು.


ಬಾರತ ಹಿಂದೂ ರಾಷ್ಟ್ರ, ಭಾರತ ಬದುಕಬೇಕಾರದೆ ಹಿಂದೂ ಸಮಾಜ ಮೈಕೊಡವಿ ಎದ್ದು ನಿಲ್ಲಬೇಕಾಗಿದೆ. ಸಾವಿರಾರೂ ವರ್ಷಗಳ ಗುಲಾಮಿತನದಿಂದ ಹೊರಬಂದಿದ್ದು, ನಮ್ಮ ಧ್ಯೇಯದೊಂದಿಗೆ ಮುನ್ನುಗ್ಗಬೇಕಾಗಿದೆ. ಹಿಂದುತ್ವದ ನೆಲೆಗಟ್ಟಿನ ಮೇಲೆ ಭಾರತ ಪುನುಥ್ಥಾನ ಸಾಧ್ಯವಿದೆ ಎಂದರು. ಗುಲಾಮಿತನದ ಸಂದರ್ಭದಲ್ಲಿ ವೀರ ಸನ್ಯಾನಿ ಸ್ವಾಮಿ ವಿವೇಕಾನಂದರು ವಿದೇಶಿಗರ ನೆಲದ ಮೇಲೆ ಹಿಂದುತ್ವದ ಬೇರನ್ನು ಬಿತ್ತಿ, ಧರ್ಮದ ಪ್ರಚಾರವನ್ನು ಮಾಡಿದ್ದಾರೆ ಎಂದರು.
ಭಾರತದ ಮೇಲೆ ಅನೇಕ ದುಷ್ಟ ಶಕ್ತಿಗಳು,ಆಕ್ರಮಣಕಾರರು ಆಡಳಿತ ನಡೆಸಲು ಸಂಚು ಹಾಕಿದ್ದರು, ಆದರೆ ಅವು ಯಾವ ಶಕ್ತಿಗಳ ಆಟ ನಡೆಯಲಿಲ್ಲ, ಅನೇಕ ಹೊರ ರಾಷ್ಟ್ರಗಳ ಇಸ್ಲಾಂಮಿಕರಣದ ಆಡಳಿತ ಇದೆ, ಆದರೆ ಭಾರತದಲ್ಲಿ ಇಸ್ಲಾಂಮಿಕರ ಎಂದು ನಡೆಯುವುದಿಲ್ಲ ಎಂದರು. ಹಿಂದೊಮ್ಮೆ ಶಾಹಿಗಳ ಆಡಳಿತ ಇದ್ದಾಗಲೇ ಹಿಂದು ಹೃದಯ ಸಮ್ರಾಟ ಶಿವಾಜಿ ಮಹಾರಾಜರ ಜನನವಾಗಿ, ಅವುಗಳನ್ನು ಸರ್ವನಾಶ ಮಾಡಿದ್ದಲ್ಲದೇ, ಭಾರತ ಯಾವುದೇ ಜಾಗದಲ್ಲಿಯೂ ಸಹ ನೆಲೆಯೂರಲು ಆ ಧೀರ ಶಿವಾಜಿ ಬಿಡಲಿಲ್ಲ ಎಂದರು.
ಬ್ರಿಟಿಷರು ಸಿಪಾಯಿ ದಂಗೆ ಎಂದು ಕರೆದಾಗ ಸ್ವಾತಂತ್ರ ವೀರ ಸಾವರ್ಕರ ಅವರು ಪ್ರಥಮ ಸ್ವಾತಂತ್ರ್ಯ ಸಗ್ರಮಾ ಎಂದು ಕರೆದಿದ್ದಾರೆ.ಬ್ರಿಟಿಷರ ಆಡಳಿತವಿದ್ದಾಗ, ಅನೇಕ ಯುವಶಕ್ತಿಗಳ ಪಡೆಯನ್ನು ಕಟ್ಟಿ, ಬೆಳೆದಿ ಕೆಂಪು ಜನರಿಗೆ ತಕ್ಕ ಪಾಠ ಕಲಿಸಿದ ಭಾರತ ಮಾತೇಯ ಧೀರಪುತ್ರ ಸಾವರ್ಕರ ಎಂದು ಬಣ್ಣಿಸಿದರು.ಅದರಂತೆ ಬಾಲಗಂಗಾಧರ ತಿಲಕರನ್ನು ಉಲ್ಲೇಖಿಸಿದ ಅವರು, ಹಿಂದೂ ಎಂದರೆ ಗಣೇಶ, ಗಣೇಶ ಎಂದು ಹಿಂದು ಎಂದು ಸಂಭೋದಿಸಿದರು.ಹಿಂದುತ್ವವೇ ಭಾರತದ ಆತ್ಮ,ಪ್ರಾಣ,ಉಸಿರು ಎಂದ ಅವರು, ಬಾರತ ಶತ್ರುಗಳು ಏನಾದರು ಇದ್ದರೆ, ಇಸ್ಲಾಂ ಹಾಗೂ ಚರ್ಚಗಳು ಭಾರತದ ಶತ್ರುಗಳು ಎಂದರು.
600 ವರ್ಷಗಳ ಕಾಲ ಕಾಲ ಆಡಳಿತ ನಡೆಸಿದರೂ, ಭಾರತದ ಮೇಲೆ ಇಸ್ಲಾಂಮಿಕರ ಮಾಡಲ ಆಗಲಿಲ್ಲ, 2014 ಹಿಂದೆ ಈ ಬಾರತ ದೇಶದಲ್ಲಿ ಎಷ್ಟು ದುಷ್ಟ ಶಕ್ತಿಗಳು ತಮ್ಮ ಆಡಳಿತ ನಡೆಸಲು ಬಂದಾಗ ಹೇಳುವವರು,ಕೇಳುವವರು ಇದ್ದಿಲ್ಲ, ಆದರೆ 2014ರ ನಂತರ ಈ ದೇಶದಲ್ಲಿ ಒಂದೆ ಒಂದು ಅಹೀತಕರ ಘಟನೆ ನಡೆದಿಲ್ಲ, ಅಕಸ್ಮಾತ ನಡೆದರೇ, ಅದರ ನದಲಾಗಿ ಪ್ರತ್ಯುತ್ತರ ನೀಡಲು ಈ ದೇಶ ಸಿದ್ದವಿದೆ ಎಂದರು. 2014ರ ನಂತರ ಜಾಗತೀಕ ಶಕ್ತಿಗಳು ಒಂದು ಪಟಾಕಿಯೂ ಸಿಡಿಸಲು ಸಾಧ್ಯವಾಗಿಲ್ಲ. ಆದರೆ 2013 ಹಿಂದೆ ಪಾರ್ಲಿಮೆಂಟ ದಾಳಿ, ಅಕ್ಷರಧಾಮ ದಾಳಿ ಸೇರಿದಂತೆ ಅನೇಕ ದಾಳಿ ನಡೆದುಹೋಗಿವೆ ಎಂದು ಕಳವಳ ವ್ಕಕ್ತಪಡಿಸಿದರು.
ಅಕ್ರಮಣಕಾರರು, ದುಷ್ಟ ಶಕ್ತಿಗಳು, ಮತಾಂಧರು ಹೊಟ್ಟಗೆ ಅನ್ನ, ಮೈಗೆ ಬಟ್ಟೆ ಕೊಟ್ಟು, ಕೊರಳಿಗೆ ಕ್ರಾಸ್ ಹಾಕಿ ಮತಾಂತರ ಮಾಡುತ್ತಿದ್ದರು,ನಿನ್ನೆಯೇ ಅಧಿವೇಶನದಲ್ಲಿ ಬಹು ದಿನಗಳ ಬೇಡಕೆಯಂತೆ ಈ ಮತಾಂತರಕ್ಕೆ ಕಡಿವಾಣ ಹಾಕುವ ಕಾಯ್ದೆಯನ್ನು ತಂದು ಅವರಿಗೆ ತಕ್ಕ ಪಾಠ ಕಲಿಸಿದೆ ಸರ್ಕಾರ ಎಂದರು. ಸಂಘದ ಸಂಸ್ಥಾಪಕರಾದ ಡಾ, ಹೆಡಗೆವಾರರ ಅವರ ಕಲ್ಪನೆಯಂತೆ ನಾವು ಎಲ್ಲರೂ ಹಿಂದು ದರ್ಮದ ರಕ್ಷಣೆ, ಜಾಗೃತಿ ಮಾಡುವ ನಿಟ್ಟಿನಲ್ಲಿ ಹಿಂದು ಸಮಾಜವನ್ನು ಬಲಿಷ್ಠ ಮಾಡುವ ನಿಟ್ಟನಲ್ಲಿ ಕೆಲಸ ಮಾಡುವ ಎಂದು ಹೇಳಿ ತಮ್ಮ ಮಾತಿಗೆ ವಿರಾಣ ನೀಡಿದರು.
ಇದಕ್ಕೂ ಮುನ್ನ ನಗರದ ನಗರೇಶ್ವರ ಶಾಲೆಯ ಮೈದಾನದಿಂದ ಸುಮಾರು 1000ಕ್ಕಿಂತ ಅಧಿಕ ಗಣವೇಷಧಾರಿಗಳ ಆಕರ್ಷಕ ಪಥಸಂಚಲನ ನಡೆಯಿತು. ಮಾರ್ಗದುದ್ದಕ್ಕೂ ಭಾರತ ಮಾತಾ ಕೀ ಜೈ, ಹೂವಿನ ಪುಸ್ಪಾರ್ಚನೆಯನ್ನು ಮಾಡಿ ಪಥಸಂಚಲನವನ್ನು ಬರಮಾಡಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಲಬುರಗಿ ಖ್ಯಾತ ಉದ್ದಿಮೇದಾರರಾದ ಶ್ರೀ ಚಂದ್ರಶೇಖರ ಸುತ್ರಾವೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾರೀರಿಕ ಪ್ರದರ್ಶನ ನಡೆಯಿತು. ಉತ್ತರ ಪ್ರಾಂತ ಸಂಘಚಾಲಕರಾದ ಖಗೇಶನ ಪಟ್ಟಣಶೆಟ್ಟಿ, ಅಶೋಕ ಪಾಟೀಲ, ಪ್ರಾಂತ ಭೌದ್ದಿಕ ಪ್ರಮುಖರಾದ ಕೃಷ್ಣಾ ಜೋಶಿ, ವಿಭಾಗ ಪ್ರಚಾರಕರಾದ ವಿಜಯ ಮಹಾಂತೇಶ, ಕಿರಣ ಸುವರ್ಣಕಾರ, ಮಲ್ಲಿನಾಥ ಅವರಾದಿ, ಚಿದಾನಂದ ಹಿರೇಮಠ ಗಣ್ಯರಾದ ಬಸವರಾಜ ದೇಶಮುಖ ಶಾಸಕ ಬಸವರಾಜ ಮತ್ತಿಮಡು, ಚಂದು ಪಾಟೀಲ, ಸಿದ್ದಾಜೀ ಪಾಟೀಲ, ಉಮೇಶ ಪಾಟೀಲ, ನೀತಿನ ಗುತ್ತೇದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss