ಪ್ರೇಕ್ಷಕರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ: ನಟಿ ಆಲಿಯಾ ಭಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಲಿವುಡ್​ ನಟ ರಣ್​​ಬೀರ್​ ಕಪೂರ್​ ಮತ್ತು ನಟಿ ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾ ವಿಶ್ವದಾದ್ಯಂತ 300 ಕೋಟಿ ಗಳಿಸಿದೆ ಎಂದು ಚಿತ್ರ ತಯಾರಕರು ಶುಕ್ರವಾರ ಘೋಷಿಸಿದ್ದು, ಆದರೆಪ್ರೇಕ್ಷಕರು ಒಪ್ಪುತ್ತಿಲ್ಲ. ಸುಳ್ಳು ಸಂದೇಶ ರವಾನೆಯಾಗುತ್ತಿದೆ ಎಂದು ಟೀಕಿಸಿದ್ದಾರೆ.
ಇದರ ನಡುವೆ ಆಲಿಯಾ ಭಟ್ ಪ್ರತಿಕ್ರಿಯಿಸಿದ್ದು, ಪ್ರೇಕ್ಷಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಚಲನಚಿತ್ರವನ್ನು ಟೀಕಿಸುವ ಹಕ್ಕು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಒಂದು- ಸಕಾರಾತ್ಮಕ ವಿಷಯಗಳ ಮೇಲೆ ನಮ್ಮ ಗಮನ ಕೇಂದ್ರೀಕರಿಸಬೇಕು ಅಥವಾ ಋಣಾತ್ಮಕವಾದವುಗಳ ಬಗ್ಗೆಯೇ ಯೋಚಿಸುತ್ತಿರುವುದು. ಟೀಕೆ, ಅಭಿಪ್ರಾಯಗಳು ಮತ್ತು ಪ್ರತಿಕ್ರಿಯೆಗಳು ಪ್ರೇಕ್ಷಕರ ಹಕ್ಕು. ನಾವು ಋಣಾತ್ಮಕವಾಗಿರುವುದಕ್ಕಿಂತ ಧನಾತ್ಮಕ ವಿಷಯಗಳನ್ನು ಮಾತ್ರ ಪಡೆಯುತ್ತೇವೆ ಎಂದು ಭಾವಿಸುತ್ತೇವೆಎಂದು ಅಹಮದಾಬಾದ್​ನಲ್ಲಿ ಬ್ರಹ್ಮಾಸ್ತ್ರ ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಆಲಿಯಾ ತಿಳಿಸಿದರು.
ಅಲ್ಲದೇ, ಬ್ರಹ್ಮಾಸ್ತ್ರ ಬಿಡುಗಡೆಯಾದಾಗಿನಿಂದ ಬಾಕ್ಸ್​ ಆಫೀಸ್​​ ಕೊಳ್ಳೆ ಹೊಡೆಯುತ್ತಿದೆ. ಚಿತ್ರವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಆಲಿಯಾ ಹೇಳಿದರು.
ಚಿತ್ರದ ಪ್ರದರ್ಶನದ ಬಗ್ಗೆ ನನಗೆ ಸಂತೋಷವಾಗಿದೆ. ನಕಾರಾತ್ಮಕ ಅಥವಾ ಧನಾತ್ಮಕವಾದ ಎಲ್ಲಾ ವಿಮರ್ಶೆಗಳನ್ನು ನಾವು ಇನ್ನೂ ಸ್ವೀಕರಿಸಬೇಕಿದೆ. ಒಟ್ಟಾರೆಯಾಗಿ ಚಲನಚಿತ್ರವು ಉತ್ತಮ ಪ್ರದರ್ಶನ ನೀಡುತ್ತಿದೆ. ನಾವು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗಾಗಿ ಚಲನಚಿತ್ರಗಳನ್ನು ಮಾಡುತ್ತೇವೆ, ಬಿಡುಗಡೆಯಾದಾಗಿನಿಂದ ಸಿನಿಮಾ ಪ್ರದರ್ಶನದ ಬಗ್ಗೆ ನಮಗೆ ತೃಪ್ತಿಯಿದೆ. ನಾನು ಧನಾತ್ಮಕ ಶಕ್ತಿಯತ್ತ ಮಾತ್ರ ಗಮನ ಹರಿಸುತ್ತೇನೆ. ವಿವಿಧ ರೀತಿಯ ವಿಮರ್ಶೆಗಳು ಬಂದಿವೆ ಎಂದು ನನಗೆ ತಿಳಿದಿದೆ ಎಂದು ನಿರ್ದೇಶಕ ಅಯಾನ್​ ಮುಖರ್ಜಿ ತಿಳಿಸಿದರು
ಸುಮಾರು 9 ವರ್ಷಗಳ ದೀರ್ಘಾವಧಿಯಲ್ಲಿ 400 ಕೋಟಿಗೂ ಅಧಿಕ ಬಜೆಟ್‌ನಲ್ಲಿ ನಿರ್ಮಿಸಿರುವ ಈ ಸಿನಿಮಾ ಸೆಪ್ಟೆಂಬರ್ 9ರಂದು ಅದ್ಧೂರಿಯಾಗಿ ಬಿಡುಗಡೆಯಾಯಿತು. ಸ್ಟಾರ್ ಸ್ಟುಡಿಯೋಸ್ ಮತ್ತು ಧರ್ಮ ಪ್ರೊಡಕ್ಷನ್ಸ್ ಬಂಡವಾಳ ಹೂಡಿರುವ ಬ್ರಹ್ಮಾಸ್ತ್ರ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!