spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚೀನಾ ಸಾಗರ ಪಾರಮ್ಯದ ವಿರುದ್ಧ ಏನಿದು ‘ಅಕುಸ್’? ಭಾರತಕ್ಕಿದು ಉತ್ತಮ ಬೆಳವಣಿಗೆಯಾ?

- Advertisement -Nitte

ಹೊಸದಿಗಂತ ಆನ್ಲೈನ್ ಡೆಸ್ಕ್:

ಸುದ್ದಿ: ಆಸ್ಟ್ರೇಲಿಯ, ಯುಕೆ, ಯುಎಸ್ ಸೇರಿಕೊಂಡು ಅಕುಸ್ ಒಡಂಬಡಿಕೆ ಮಾಡಿಕೊಂಡಿವೆ. ಇದರ ಮುಖ್ಯಾಂಶವೆಂದರೆ ಆಸ್ಟ್ರೇಲಿಯಕ್ಕೆ ಅಮೆರಿಕವು ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಗಳ ತಂತ್ರಜ್ಞಾನ ನೀಡಲಿದೆ. ಇದೇ ತಂತ್ರಜ್ಞಾನವನ್ನು ವ್ಯಾವಹಾರಿಕವಾಗಿ ಆಸ್ಟ್ರೇಲಿಯಕ್ಕೆ ಕೊಡುವುದಕ್ಕೆ ಒಪ್ಪಂದದ ಮಾತುಕತೆ ಆಡಿದ್ದ ಫ್ರಾನ್ಸ್ ಈಗ ಮುನಿಸಿಕೊಂಡು ಅಮೆರಿಕ ಮತ್ತು ಆಸ್ಟ್ರೇಲಿಯಗಳಿಂದ ತನ್ನ ರಾಯಭಾರಿಗಳನ್ನು ಹಿಂದಕ್ಕೆ ಕರೆಸಿಕೊಂಡಿದೆ.

ಆದರೆ ಈ ಸುದ್ದಿಗೌಜಿನ ನಡುವೆ ಈ ಒಟ್ಟಾರೆ ವಿದ್ಯಮಾನ ನೀಡುತ್ತಿರುವ ಸಂದೇಶಗಳು ಹೀಗಿವೆ.

ಚೀನಾ ಸಾಗರ ಪಾರಮ್ಯಕ್ಕೆ ಬಹುದೊಡ್ಡ ಸವಾಲು

ಕೆಲವೇ ವರ್ಷಗಳ ಹಿಂದೆ ಚೀನಾದ ಕಟ್ಟರ್ ಸ್ನೇಹಿತನಾಗಿದ್ದ ಆಸ್ಚ್ರೇಲಿಯ ಕೊರೋನಾ ಕಾಲಘಟ್ಟದಲ್ಲಿ ಚೀನಾದೊಂದಿಗೆ ಮುನಿಸಿಕೊಂಡಿತು. ಅದರ ಬೆನ್ನಲ್ಲೇ ಭಾರತ ಮತ್ತು ಅಮೆರಿಕಗಳೊಡನೆ ಆಸ್ಟ್ರೇಲಿಯದ ಸ್ನೇಹ ಗಾಢವಾಗುತ್ತ ಸಾಗಿತ್ತು. ಇದೀಗ ಅಕುಸ್ ಮೂಲಕ ದಕ್ಷಿಣ ಚೀನಾ ಸಮುದ್ರ ಹಾಗೂ ಫೆಸಿಫಿಕ್ ಪ್ರಾಂತ್ಯಗಳಲ್ಲಿ ಚೀನಾದ ಪ್ರಭಾವವನ್ನು ಸಮತೋಲನದಲ್ಲಿಡುವುದರಲ್ಲಿ ಬಹುಮುಖ್ಯ ಭೂಮಿಕೆ ನಿಭಾಯಿಸುವುದಕ್ಕೆ ಮುಂದಾಗಿದೆ ಆಸ್ಟ್ರೇಲಿಯ.  

ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಯ ಮಹತ್ವ

ಗಮನಿಸಿ, ಇದು ಅಣುಶಕ್ತಿ ಚಾಲಿತ ನೌಕೆಯೇ ಹೊರತು ‘ಅಣ್ವಸ್ತ್ರ’ ನೌಕೆ ಅಲ್ಲ. ಆದರೆ ಉಳಿದ ಎಂಜಿನ್ ಗಳಿಗಿಂತ ಅಣುಚಾಲಿತ ನೌಕೆಗಳ ಸಾಮರ್ಥ್ಯ ಹೆಚ್ಚು. ಅದು ವೇಗವಾಗಿ ಹಾಗೂ ಗುರುತು ಸಿಗದಂತೆ ಸಾಗುವ ಕ್ಷಮತೆ ಹೊಂದಿದೆ. ಇದರಲ್ಲಿ ಹೆಚ್ಚಿನ ಸಾಮರ್ಥ್ಯದ ಹಾಗೂ ಹೆಚ್ಚುದೂರ ಚಿಮ್ಮುವ ಕ್ಷಿಪಣಿಗಳನ್ನು ಬಳಸಬಹುದು. ಕೇವಲ ಇಂಗ್ಲೆಂಡ್ ಜತೆ ಮಾತ್ರ ಹಂಚಿಕೊಂಡಿದ್ದ ತಂತ್ರಜ್ಞಾನವನ್ನು ಈಗ ಅಮೆರಿಕವು ಆಸ್ಟ್ರೇಲಿಯದೊಂದಿಗೆ ಹಂಚಿಕೊಳ್ಳುತ್ತಿದೆ.

ಭಾರತಕ್ಕೂ ತುಸು ನಿರಾಳ

ಸಾಗರ ತೀರದಲ್ಲಿ ಪಾಶ್ಚಾತ್ಯ ಸೇನೆಗಳ ಬಲ ಹೆಚ್ಚುವುದು ಚೀನಾವನ್ನು ಸಮತೋಲನದಲ್ಲಿಡುವ ನಿಟ್ಟಿನಲ್ಲಿ ಭಾರತಕ್ಕೂ ಪೂರಕವೇ ಆಗಲಿದೆ. ಅಕುಸ್ ಆ ಮೂರು ರಾಷ್ಟ್ರಗಳಿಗೆ ಮಾತ್ರವೇ ಸಂಬಂಧಿಸಿದ್ದಾದರೂ ಸಾಗರ ತೀರವನ್ನು ಈ ಬಲಗಳು ಪರಿಶೀಲನೆಯಲ್ಲಿಡುವಾಗ ಭಾರತಕ್ಕೆ ಅಷ್ಟರಮಟ್ಟಿಗೆ ನಿರಾಳವಾಗುತ್ತದೆ. ಈ ಅವಧಿಯಲ್ಲಿ ಭಾರತಕ್ಕೆ ತನ್ನ ಸ್ವಂತದ ನೌಕಾಬಲವನ್ನು ಹೆಚ್ಚಿಸಿಕೊಳ್ಳುವುದಕ್ಕೂ ಅವಕಾಶವಾಗುತ್ತದೆ. ಅಮೆರಿಕ, ಇಂಡಿಯಾ, ಆಸ್ಟ್ರೇಲಿಯ, ಜಪಾನ್ ಇವು ಸಾಗರ ಮಾರ್ಗಗಳ ಸುರಕ್ಷತೆಗೆ ಕ್ವಾಡ್ ಕೂಟ ರಚಿಸಿಕೊಂಡಿವೆ ಎಂಬುದೂ ಇಲ್ಲಿ ಗಮನಾರ್ಹ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss