Thursday, August 11, 2022

Latest Posts

ಫ್ರಾನ್ಸ್ ನಿಂದ ಜಲಾಂತರ್ಗಾಮಿ ನೌಕೆ ಖರೀದಿ ಒಪ್ಪಂದ ರದ್ದುಪಡಿಸಿದ ಆಸ್ಟ್ರೇಲಿಯಾ: ಕಾರಣವೇನು?

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಫ್ರಾನ್ಸ್ ಹಾಗೂ ಆಸ್ಟ್ರೇಲಿಯಾ ನಡುವೆ ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಲು ಆಗಿದ್ದ ಒಪ್ಪಂದವು ರದ್ದುಗೊಂಡಿದ್ದು, ಉಭಯ ರಾಷ್ಟ್ರಗಳನಡುವೆ ಇದೀಗ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿದೆ.

 ಆಸ್ಟ್ರೇಲಿಯಾವು ಅಮೆರಿಕ ಮತ್ತು ಬ್ರಿಟನ್ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದು, ಹೀಗಾಗಿ ಈ  ಮೊದಲು ಫ್ರಾನ್ಸ್ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ಕೈ ಬಿಟ್ಟಿದೆ.

ಫ್ರಾನ್ಸ್ ಇದರಿಂದ ಆಕ್ರೋಶಗೊಂಡಿದ್ದು, ಬ್ರಿಟನ್‌ನ ಸಶಸ್ತ್ರಪಡೆಗಳ ಸಚಿವರ ಜೊತೆ ಈ ವಾರ ನಡೆಯಬೇಕಿದ್ದ ಸಭೆಯನ್ನು ರದ್ದುಗೊಳಿಸಿದೆ ಮತ್ತು ಆಸ್ಟ್ರೇಲಿಯಾ ಹಾಗೂ ಅಮೆರಿಕದಲ್ಲಿರುವ ತನ್ನ ರಾಯಭಾರಿಗಳನ್ನು ವಾಪಸ್ ತವರಿಗೆ ಕರೆಸಿದೆ.  ಫ್ರಾನ್ಸ್ ನ ಈ ಹೆಜ್ಜೆಯಿಂದ ಬಿಕ್ಕಟ್ಟು ಮತ್ತುಷ್ಟು ಜಟಿಲವಾಗಿದೆ.

ಫ್ರಾನ್ಸ್‌ನಿಂದ  ಸುಮಾರು 5 ಲಕ್ಷ ಕೋಟಿ ರೂ. ಮೊತ್ತದ  12 ಸಾಂಪ್ರದಾಯಿಕ ಡೀಸೆಲ್‌ ಚಾಲಿತ ಜಲಾಂತರ್ಗಾಮಿ ನೌಕೆ ಖರೀದಿಗೆ ಆಸ್ಟ್ರೇಲಿಯಾ ಒಪ್ಪಂದ ಮಾಡಿಕೊಂಡಿತ್ತು.

ಆದರೆ ಇತ್ತೀಚೆಗೆ ಅಮೆರಿಕ ಆಸ್ಟ್ರೇಲಿಯಾ ಮತ್ತು ಬ್ರಿಟನ್ ಜೊತೆಗೆ ಹೊಸ ಮೈತ್ರಿಕೂಟ ಮಾಡಿಕೊಂಡಿದ್ದು, ಆಸ್ಟ್ರೇಲಿಯಾದ ನೌಕಾಪಡೆಗೆ ಅಣು ಇಂಧನ ಚಾಲಿತ ಎಂಟು ಜಲಾಂತರ್ಗಾಮಿ ನೌಕೆಗಳನ್ನುನೀಡುವುದಾಗಿಅಮೆರಿಕ ಮಾತು ಕೊಟ್ಟಿದೆ.

ಈ ಬೆಳವಣಿಗೆ ನಂತರ ಫ್ರಾನ್ಸ್ ಹಾಗೂ ಆಸ್ಟ್ರೇಲಿಯಾ ನಡುವೆ ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಲು ನಡೆದ ಒಪ್ಪಂದ ರದ್ದಾಯಿತು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss