ಶೀಘ್ರದಲ್ಲೇ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ರಾಯಭಾರ ಕಚೇರಿ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ರಾಯಭಾರಿ ಕಚೇರಿ ಶೀಘ್ರದಲ್ಲೇ ಆರಂಭವಾಗಲಿದೆ.
ಆಸ್ಟ್ರೇಲಿಯಾ 2023ಕ್ಕೆ ತನ್ನ ರಾಯಭಾರ ಕಚೇರಿಯನ್ನು ಬೆಂಗಳೂರಿನಲ್ಲಿ ತೆರೆಯಲು ನಿರ್ಧರಿಸಿದ್ದು, ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಟಿಮ್ ವಾಟ್ಸ್ ಅವರು ಟೆಕ್ ಶೃಂಗಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಈ ಹೊಸ ರಾಯಭಾರ ಕಚೇರಿಯನ್ನು ಸೇರಿಸಿ ಭಾರತದಲ್ಲಿ ಐದು ರಾಜತಾಂತ್ರಿಕ ಕಚೇರಿಗಳಿವೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಉದಯೋತ್ಮುಖ ತಂತ್ರಜ್ಞಾನ ನೀತಿಗಾಗಿ ನಮ್ಮ ಹೊಸ ಜಂಟಿ ಆಸ್ಟ್ರೇಲಿಯಾ-ಭಾರತ ಶ್ರೇಷ್ಠತೆಯ ಕೇಂದ್ರವನ್ನು ತೆರೆಯಲು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!