ನರೇಂದ್ರ ಮೋದಿ ಪ್ರಿಯ ಭಕ್ಷ್ಯ ಖಿಚಡಿ ತಯಾರಿಸಿ ಸಂಭ್ರಮಿಸಿದ ಆಸ್ಟ್ರೇಲಿಯಾ ಪ್ರಧಾನಿ ಮಾರಿಸನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನೆಚ್ಚಿನ ಭಕ್ಷ್ಯವಾದ ಖಿಚಡಿಯನ್ನು ತಯಾರಿಸುವ ಮೂಲಕ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಭಾರತದೊಂದಿನ ಹೊಸ ವ್ಯಾಪಾರ ಒಪ್ಪಂದದ ಸಂಭ್ರಮ ಆಚರಿಸಿದ್ದಾರೆ.
ವಿವಿಧ ಮೇಲೊಗರಗಳನ್ನು ಹಾಕಿ ತಾವು ಖಿಚಡಿ ತಯಾರಿಸುತ್ತಿರುವ ಚಿತ್ರಗಳನ್ನು ಮಾರಿಸನ್ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತದೊಂದಿಗಿನ ನಮ್ಮ ಹೊಸ ವ್ಯಾಪಾರ ಒಪ್ಪಂದವನ್ನು ಆಚರಿಸಲು ನಾನು ಇಂದು ರಾತ್ರಿ ಖಿಚಡಿ ಮಾಡುವುದನ್ನು ಆಯ್ಕೆ ಮಾಡಿಕೊಂಡೆ. ಇದರಕ್ಕೆ ಬೇಕಾದ ಪದಾರ್ಥಗಳು ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ಪ್ರಾಂತ್ಯದಿಂದ ಬಂದವು. ಅವರ ನೆಚ್ಚಿನ ಖಿಚಡಿ ತಯಾರಾಗುತ್ತಿದೆ ನೋಡಿ ಎಂದು ಮೋರಿಸನ್ ತಮ್ಮ ಫೇಸ್‌ ಬುಕ್‌, ಇನ್ಸ್ಟಾಗ್ರಾಮ್‌ ಹ್ಯಾಂಡಲ್‌ಗಳಲ್ಲಿ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ಏಪ್ರಿಲ್ 2 ರಂದು ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳು ಆರ್ಥಿಕ ಸಹಕಾರ ಮತ್ತು ಪ್ರಮುಖ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!