Sunday, April 18, 2021

Latest Posts

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿಶೇಷ ದಾಖಲೆ ಬರೆದ ಆಸ್ಟ್ರೇಲಿಯಾ ಮಹಿಳಾ ಟೀಮ್!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​​ ಮಹಿಳಾ ತಂಡಗಳ ನಡುವೆ ನಡೆದ ಏಕದಿನ ಕ್ರಿಕೆಟ್‌‌ ಸರಣಿಯಲ್ಲಿ ಆಸ್ಟ್ರೇಲಿಯಾ ಭರ್ಜರಿ ಜಯಗಳಿಸುವ ಮೂಲಕ ವಿಶೇಷ ದಾಖಲೆಯೊಂದನ್ನು ಬರೆದಿದೆ.
ಮೆಗ್ ಲ್ಯಾನಿಂಗ್ ನೇತೃತ್ವದ ಆಸೀಸ್ ತಂಡವು ಕಿವೀಸ್​​ ವಿರುದ್ಧ 6 ವಿಕೆಟ್​ಗಳ ಗೆಲುವು ಪಡೆದಿದೆ. ಈ ಗೆಲುವಿನೊಂದಿಗೆ ಏಕದಿನ ಮಾದರಿ ಕ್ರಿಕೆಟ್​ನಲ್ಲಿ ಸತತ 22 ಪಂದ್ಯ ಗೆದ್ದ ವಿಶೇಷ ಗೌರವಕ್ಕೆ ಕಾಂಗರೂ ಪಡೆ ಪಾತ್ರವಾಗಿದೆ.
ಈ ಮೊದಲು ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ಪುರುಷರ ತಂಡ ಸತತ 21 ಏಕದಿನ ಪಂದ್ಯ ಗೆದ್ದು ದಾಖಲೆ ನಿರ್ಮಿಸಿತ್ತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss