ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರ ಟಾಯ್ಲೆಟ್ನಲ್ಲಿ ಭಾರೀ ಉದ್ದದ ಹಾವೊಂದು ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಸಿತ್ತು. ಕ್ವೀನ್ಸ್ಲ್ಯಾಂಡ್ನ ಹರ್ವೆ ಬೇಯಲ್ಲಿ ವ್ಯಕ್ತಿಯೊಬ್ಬರ ಶೌಚಾಲಯದಲ್ಲಿ ಬುಸ್ ಬುಸ್ ಶಬ್ಧ ಕೇಳಿ ಕಂಗಾಲಾದ ಕುಟುಂಬದವರು ಹುಡುಕಾಡಿದ್ದಾರೆ. ಟಾಯ್ಲೆಟ್ನಲ್ಲಿ ಉದ್ದದ ಕರಿ ಬಣ್ಣದ ಹಾವು ಕಂಡು ಎಲ್ಲರೂ ಔಹಾರಿದ್ದಾರೆ.
ಡೆಂಡ್ರಾಲೋಫಿಸ್ ಪಂಕ್ಟುಲೇಟಾ ಎಂದು ಕರೆಯಲ್ಪಡುವ ಹಾವು ವಿಷರಹಿತ ಎಂದು ಕಂಡುಬಂದಿದೆ. ಇದರಿಂದ ಮನುಷ್ಯರಿಗೆ ಯಾವುದೇ ಅಪಾಯವಿಲ್ಲ ಎಂಬುದು ತಿಳಿದ ಬಳಿಕ ಕುಟುಂಬ ನಿರಾಳವಾಯಿತು. ಮಹಿಳಾ ಹಾವು ಹಿಡಿಯುವವರೊಬ್ಬರು ಶೌಚಾಲಯಕ್ಕೆ ಹೋಗಿ ಹಾವು ಹಿಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.