ಹೊಸದಿಗಂತ ವರದಿ ವಿಜಯಪುರ:
ಆಟೋ ಹಾಗೂ ಬೈಕ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಇಲ್ಲಿನ ಕಾಳಿಕಾ ನಗರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಇಲ್ಲಿನ ರೇಣುಕಾ ಮೆಂಡೇಗಾರ ಎಂಬುವರಿಗೆ ಸೇರಿದ ಒಂದು ಆಟೋ, ಒಂದು ಬೈಕ್ ಅನ್ನು ಮನೆಯ ಎದುರು ನಿಲ್ಲಿಸಿದ ವೇಳೆ, ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ವಾಹನಗಳು ಭಸ್ಮವಾಗಿವೆ. ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.