ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಉಡುಗೊರೆಗಳು ಸಿಕ್ಕಿವೆ. ಬಸ್‌ನಲ್ಲಿ ಉಚಿತ ಪ್ರಯಾಣ ಘೋಷಣೆಯಾದಾಗಿನಿಂದ ಮಹಿಳೆಯರು ಸಖತ್ ಖುಷಿಯಾಗಿದ್ದಾರೆ.
ಆದರೆ ಖಾಸಗಿ ಬಸ್ ಮಾಲೀಕರು ಮಾತ್ರ ಕಂಗಾಲಾಗಿದ್ದಾರೆ, ಅಲ್ಲಿ ಫ್ರೀಯಾಗಿ ಕರ‍್ಕೊಂಡು ಹೋಗುವಾಗ ನಮ್ಮಲ್ಲಿ ದುಡ್ಡು ಕೊಟ್ಟು ಯಾಕೆ ಬರ‍್ತಾರೆ ಎಂದು ಖಾಸಗಿ ಬಸ್‌ನವರು ಅಳಲು ತೋಡಿಕೊಂಡಿದ್ದಾರೆ.
ಇನ್ನು ಇದೇ ಸಾಲಿಗೆ ಇದೀಗ ಆಟೋದವರೂ ಸೇರಿದ್ದು, ಹೆಚ್ಚಿನ ದುಡಿಮೆಯಾಗುತ್ತಿದ್ದಿದ್ದೇ ಹೆಣ್ಣುಮಕ್ಕಳಿಂದ, ಈಗ ಆಟೋದಲ್ಲಿ ಬಾರದೇ ಎಲ್ಲರೂ ಬಸ್‌ನಲ್ಲೇ ಹೋಗ್ತಾರೆ. ನಮ್ಮ ಕಥೆ ಏನು ಎಂದು ಆಟೋ ಚಾಲಕರು ನೊಂದುಕೊಂಡಿದ್ದಾರೆ.
ರಾಜ್ಯಾದ್ಯಂತ ಮಹಿಳೆಯರು ಬಸ್‌ಗೆ ಕಾಯಲು ಇಷ್ಟವಿಲ್ಲದೆ ಅಥವಾ ಬಿಸಿಲು ಇನ್ನಿತರ ಕಾರಣಗಳಿಗೆ ಸದಾ ಆಟೋ ಮೇಲೆ ಅವಲಂಬಿತರಾಗಿರುತ್ತರು. ಸಣ್ಣ ಪುಟ್ಟ ಚೌಕಾಸಿ ಮಾಡಿಯಾದ್ರೂ ಆಟೋ ಹತ್ತುತ್ತಿದ್ದರು. ಆದರೆ ಇದೀಗ ಆಟೋಗೆ ಕೊಡುವ 40 ರೂಪಾಯಿ ಉಳಿಸೋದಕ್ಕೆ ಬಸ್‌ಗಳಲ್ಲಿ ಪ್ರಯಾಣ ಮಾಡಲಿದ್ದು, ಇದು ಆಟೋ ಚಾಲಕರ ದುಡಿಮೆಗೆ ಭಾರೀ ಹೊರೆಯಾಗಲಿದೆ ಎಂದು ಚಾಲಕರು ಹೇಳಿದ್ದಾರೆ.