ಹೊಸದಿಗಂತ ಆನ್ಲೈನ್ ಡೆಸ್ಕ್:
ದೇಶಾದ್ಯಂತ ಗಣೇಶ ಚತುರ್ಥಿ ಆಚರಣೆ ಮುಗಿದಿದೆ. ಗಣೇಶ ಹಬ್ಬಕ್ಕೆಂದು ಮಾಡಿದ ಸಿಹಿತಿನಿಸುಗಳು ಖಾಲಿ ಆಗಿವೆ. ಆದರೆ ಮಹಾರಾಷ್ಟ್ರದಲ್ಲಿ ಮಾತ್ರ ಹಬ್ಬ ಮುಗಿದು ಇಷ್ಟು ಸಮಯವಾದ್ರೂ ಇನ್ನೂ ಹಬ್ಬದ ಸಂಭ್ರಮ ಮನೆಮಾಡಿದೆ.
ಸಂಭ್ರಮ ದುಪ್ಪಟ್ಟು ಮಾಡಲು ನಾಸಿಕ್ನ ಸಿಹಿ ಅಂಗಡಿಯೊಂದು ಚಿನ್ನ ಲೇಪಿತ ಮೋದಕ ತಯಾರು ಮಾಡಿದೆ.
ಸಾಗರ್ ಸ್ವೀಟ್ಸ್ನಲ್ಲಿ ಚಿನ್ನ ಲೇಪಿತ ಮೋದಕ ದೊರೆಯಲಿದ್ದು ಕೆ.ಜಿ.ಗೆ 12,000 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಈ ಮೋದಕದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಿನ್ನಲೇಪಿತ ಮೋದಕದ ಬೆಲೆ ನೋಡಿ ದಂಗಾಗಿದ್ದಾರೆ. ಇಷ್ಟು ದುಡ್ಡು ಕೊಟ್ಟು ಯಾರು ಖರೀದಿಸ್ತಾರೆ ಎನ್ನುತ್ತಿದ್ದಾರೆ. ಆದರೆ ಅಂಗಡಿ ಮಾಲೀಕ ದೀಪಕ್ ಚೌಧರಿ ಅಂಗಡಿಗೆ ಮೋದಕದಿಂದ ತುಂಬಾನೇ ಲಾಭ ಆಗಿದೆ. 25 ಬಗೆಯ ಮೋದಕ ಮಾಡಿದ್ದು, ಎಲ್ಲವೂ ಖಾಲಿ ಆಗುತ್ತಿದೆ ಎಂದಿದ್ದಾರೆ.