ಅವತಾರ್-2 ಟಿಕೆಟ್ ಬೆಲೆ 1650 ರೂ.: ಆದ್ರೂ ಸಿನಿಮಾ ನೋಡೇ ನೋಡ್ತೀವಿ ಅಂತಿದ್ದಾರೆ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಪ್ರಮುಖ ಮಲ್ಟಿಪ್ಲೆಕ್ಸ್‌ಗಳಲ್ಲಿ ಅವತಾರ್-2 ಸಿನಿಮಾ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಇನ್ನೂ ಹಲವೆಡೆ ಟಿಕೆಟ್ ಬುಕ್ಕಿಂಗ್ ಓಪನ್ ಆಗಬೇಕಿದೆ.

ಟಿಕೆಟ್ ಬುಕ್ಕಿಂಗ್ ದರ 1,650 ರೂಪಾಯಿಗಳಾದರೂ ಕಿಂಚಿತ್ತೂ ಬೇಜಾರಿಲ್ಲದೆ ಜನ ಟಿಕೆಟ್ ಬುಕ್ಕಿಂಗ್‌ಗೆ ಮುಂದಾಗಿದ್ದಾರೆ. ಟಿಕೆಟ್ ದರ ಹೆಚ್ಚು, ಸಿನಿಮಾ ಒಟಿಟಿಗೆ ಬಂದಮೇಲೆ ನೋಡ್ಕೋತೀವಿ ಅನ್ನೋರ ಮಧ್ಯೆ ಅವತಾರ್ ಫ್ಯಾನ್ಸ್ ವಿಭಿನ್ನವಾಗಿ ಕಾಣುತ್ತಿದ್ದಾರೆ.

ಎಲ್ಲ ಸಿನಿಮಾ ಹೆಚ್ಚಿನ ಟಿಕೆಟ್ ದರ 300 ಅಥವಾ 350 ರೂ. ಇರಬಹುದು. ಆದರೆ ಈ ಸಿನಿಮಾದ ದರ 1,650 ರೂಪಾಯಿಗಳಾಗಿದೆ. ಹಾಗಿದ್ದರೂ ಕೂಡ ಪ್ರೇಕ್ಷಕರಿ ಮುಗಿಬಿದ್ದಿದ್ದು, ಚಿತ್ರದ ಟಿಕೆಟ್ ಬುಕ್ ಮಾಡುತ್ತಿದ್ದಾರೆ.

ಡಿಸೆಂರ್ 16ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ರಿಲೀಸ್‌ಗೂ 24 ದಿನ ಮುನ್ನವೇ ಟಿಕೆಟ್ ಬುಕ್ಕಿಂಗ್ ಓಪನ್ ಮಾಡಿದ್ದು, 3ಡಿ, ಐಮ್ಯಾಕ್ಸ್ 3ಡಿ, 4ಡಿ ಎಕ್ಸ್ ಮುಂತಾದ ವರ್ಷನ್‌ಗಳಲ್ಲಿ ಸಿನಿಮಾ ತೆರೆಕಾಣಲಿದೆ.

ಬೆಂಗಳೂರಿನ ಪ್ರಮುಖ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ800,1000,1500,1650 ಇದೆ. ಆದರೂ ಬುಕ್ಕಿಂಗ್ ಆಗುತ್ತಲೇ ಇದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!