ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊರೋನಾ ವಿರುದ್ಧ ‘RRR’ ಚಿತ್ರತಂಡದಿಂದ ಜಾಗೃತಿ ಸಂದೇಶ: ಲಸಿಕೆ ತೆಗೆದುಕೊಳ್ಳುವಂತೆ ಎಲ್ಲರಲ್ಲಿ ಮನವಿ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಕೊರೋನಾ ಹೆಚ್ಚುತ್ತಿದ್ದು, ಈ ಹಿನ್ನೆಲೆ ಈಗಾಗಲೇ ಅನೇಕ ಸೆಲಿಬ್ರೆಟಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡ್ತಿದ್ದಾರೆ.ಇದೀಗ ರಾಜಮೌಳಿ ನಿರ್ದೇಶನದ ‘ಆರ್ ಆರ್ ಆರ್’ ಚಿತ್ರತಂಡ ವಿಡಿಯೋ ತುಣುಕವೊಂದನ್ನ ಶೇರ್ ಮಾಡಿದ್ದು, ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿದೆ.
ಚಿತ್ರ ತಂಡದ ನಟರಾದ ರಾಮ್​ ಚರಣ್, ಜೂ. ಎನ್​ಟಿಆರ್​, ಆಲಿಯಾ ಭಟ್​, ಅಜಯ್​ ದೇವಗನ್​​ ಹಾಗೂ ನಿರ್ದೇಶಕ ರಾಜಮೌಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಈ ವಿಡಿಯೋ ತುಣುಕೊಂದನ್ನು ನಟಿ ಆಲಿಯಾ ಭಟ್ ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಶೇರ್ ಮಾಡಿದ್ದಾರೆ.
ಕೋವಿಡ್​ ವಿರುದ್ಧದ ಹೋರಾಟದಲ್ಲಿ ಮಾಸ್ಕ್​ಗಳು, ಸ್ಯಾನಿಟೈಸರ್​ಗಳು ದೊಡ್ಡ ಅಸ್ತ್ರಗಳಾಗಿದ್ದು, ಮಾಸ್ಕ್​ಗಳನ್ನ ಯಾವಾಗಲೂ ಹಾಕಿಕೊಂಡು, ಮೇಲಿಂದ ಮೇಲೆ ಕೈ ಸ್ವಚ್ಛಗೊಳಿಸಿಕೊಳ್ಳಿ ಎಂದಿದ್ದಾರೆ.
ಜತೆಗೆ ಕೋವಿಡ್​ ವ್ಯಾಕ್ಸಿನ್​​ ಹಾಕಿಸಿಕೊಳ್ಳಿ ಹಾಗೂ ಇತರರೂ ಲಸಿಕೆ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss