ಪರಿಸರಕ್ಕಾಗಿ ಜಾಗೃತಿ ಓಟ:‌ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಲನೆ

ಹೊಸದಿಗಂತ ವರದಿ ಹುಬ್ಬಳ್ಳಿ:‌ 

ಸೃಷ್ಟಿಯನ್ನು ಪೂಜಿಸುವ ದೇಶ ಭಾರತ. ಈ ವಿಚಾರವಾಗಿಯೇ ವಿಶ್ವದ ಅನೇಕ ದೇಶಗಳು ಭಾರತವನ್ನು ಅನುಸರಿಸುತ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಭಾನುವಾರ ನಗರದ ತೋಳನಕೆರೆಯಲ್ಲಿ ವಸುಂಧರಾ ಫೌಂಡೇಷನ್, ಗ್ರೀನ್ ಕರ್ನಾಟಕ ಅಸೋಸಿಯೇಶನ್, ವಿ. ಕೆ. ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪರಿಸರಕ್ಕಾಗಿ ಜಾಗೃತಿ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಲೈಫ್ ಮಿಷನ್ ನೀಡಿದ್ದು, ವಿದೇಶಗಳು ಸಹ ಇದನ್ನು ಅನುರಿಸುತ್ತಿದ್ದಾರೆ ಎಂದರು.

ಪರಿಸರ ದಿನಾಚಾರಣೆ ಒಂದು ದಿನಕ್ಕೆ ಅಷ್ಟೇ ಸೀಮಿತವಾಗಬಾರದು. ನಮ್ಮ ಪೀಳಿಗೆ ಸೃಷ್ಟಿಯ ಸಂರಕ್ಷಣೆ ಕಾರ್ಯದಲ್ಲಿ ತೊಡಗಬೇಕಿದೆ ಎಂದು ಹೇಳಿದರು.

ಪರಿಸರ ಸಂರಕ್ಷಣೆ ಮಾಡದ ಕಾರಣ ಭೂಮಿ ಅಗತ್ಯಕ್ಕಿಂತ ಹೆಚ್ಚು ಕಾಯುತ್ತಿದೆ. ಇದರ ಪರಿಣಾಮ ಏರುಪೇರಾಗಿ ಮಳೆ, ಚಳಿ, ಬೇಸಿಗೆ ಕಾಲದಲ್ಲಿ ವ್ಯತ್ಯಾಸವಾಗುತ್ತಿದ್ದು, ವಿನಾಶಕ್ಕೆ ಕಾರಣವಾಗುತ್ತಿದೆ ಎಂದು ತಿಳಿಸಿದರು.

ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಶನಲ್ ಫೌಂಡೇಷನ್ ಅಧ್ಯಕ್ಷ ಬಳ್ಳೂತ ಉಮೇಶ ಮಾತನಾಡಿ, ಪರಿಸರ ಸಂರಕ್ಷಣೆಗೆ ನಮ್ಮ‌ ಮನಸ್ಸು ಸಹ ಬದಲಾಯಯಿಸಿಕೊಳ್ಳಬೇಕಿದೆ. ಪ್ರಕೃತಿ ಉಳುವಿಗಾಗಿ ವರ್ಷದಲ್ಲಿ ಕನಿಷ್ಠ ಐದು ಗುಂಡಿಯಾದರೂ ತೆಗೆದು ಗಿಡ ನೆಡಬೇಕು ಎಂದರು.

ಇಡೀ ಜಗತ್ತಿಗೆ ಸಂಸ್ಕಾರ ನೀಡಿದವರು ನಮ್ಮ ಪೂರ್ವಜರು. ಈಗ ಜಗತ್ತು ನಮಗೆ ಸಂಸ್ಕರ ನೀಡುವಂತಾಗಿದೆ. ಇನ್ನಾದರೂ ಜನರು ಜಾಗೃತರಾಗಿ ಪ್ಲಾಸ್ಟಿಕ್ ಬಳಕೆ ಕೈಬಿಡಬೇಕು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!