Monday, October 3, 2022

Latest Posts

ಭಾಷಣದ ವೇಳೆ ಎಡವಟ್ಟು: ರಾಹುಲ್ ಗಾಂಧಿ ಎನ್ನುವ ಬದಲು ಪ್ರಧಾನಿ ಮೋದಿ ಎಂದ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೈಸೂರಿನಲ್ಲಿ ಭಾರತ್‌ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತಿನ ಭರದಲ್ಲಿ ರಾಹುಲ್ ಗಾಂಧಿ ಎನ್ನುವ ಬದಲು ಪ್ರಧಾನಿ ಮೋದಿ ಎಂದು ಹೇಳಿದ್ದಾರೆ. ಭಾಷಣದಲ್ಲಿ ಈ ದೇಶದಲ್ಲಿ ಸರ್ಕಾರವನ್ನು ಕಿತ್ತು ಎಸೆಯುವ ಸಲುವಾಗಿ ನರೇಂದ್ರ ಮೋದಿಯವರು ನಿಮ್ಮೆಲ್ಲ ಒಗ್ಗಟ್ಟಾಗಿ ಅಂತ ಭಾರತ್‌ ಜೋಡೋ ಪಾದಾಯಾತ್ರೆ ಮಾಡುತ್ತಿದ್ದಾರೆ ಅಂತ ಹೇಳಿದರು. ಈ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.

ದೇಶಕ್ಕೆ ಸ್ವಾಂತ್ರತ್ಯ ಬಂದು 75 ವರ್ಷವಾಗಿದ್ದು, ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ದಲಿತರು, ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರು ನೆಮ್ಮದಿಯಿಂದ ಇಲ್ಲ, ಈ ವರ್ಗದ ಜನ ಆತಂಕಕ್ಕೆ ಒಳಗಾಗಿದ್ದಾರೆ, ಧರ್ಮ ರಾಜಕಾರಣದಲ್ಲಿ ದೇಶವನ್ನು ಚೂರು ಮಾಡುವ ಕೆಲಸವನ್ನು ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ಈ ದೇಶದಲ್ಲಿ ಅನೇಕ, ಜಾತಿ, ಧರ್ಮ, ಅನೇಕ ಸಂಸ್ಕ್ರತಿ ಇದ್ದು, ಇಲ್ಲಿ ವೈವಿದ್ಯತೆಯನ್ನು ಕಾಣಬಹುದಾಗಿದ್ದು, ಇದು ಬಹುತ್ವದಿಂದ ಕೂಡಿದ ದೇಶವಾಗಿದೆ ಅಂತ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!